ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ಕನ್ಕೇರ್ನಲ್ಲಿ ಚುನಾವಣಾ ರ್ಯಾಲಿ ವೇಳೆ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಚಿತ್ರ ಬಿಡಿಸಿ ಪ್ರದರ್ಶಿಸಿದ್ದ ಘಟನೆ ಎಲ್ಲರಿಗೂ ನೆನಪಿದೆ, ಚಿತ್ರ ನೋಡಿದ ಪ್ರಧಾನಿ ಮೋದಿ ಚಿತ್ರದ ಹಿಂದೆ ವಿಳಾಸ ಬರೆದುಕೊಡಿ, ಪತ್ರ ಬರೆಯುತ್ತೇನೆ ಎಂದು ಹೇಳಿದ್ದರು.
ಹೇಳಿದ ಮಾತಿನಂತೆ ಬಾಲಕಿ ಆಕಾಂಕ್ಷಗೆ ಪ್ರಧಾನಿ ಮೋದಿ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ. ನಿಮ್ಮ ಸ್ಕೆಚ್ ನನಗೆ ತಲುಪಿದೆ, ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು, ನಿಮ್ಮೆಲ್ಲರಿಂದ ಪಡೆಯುವ ಪ್ರೀತಿ ರಾಷ್ಟ್ರಸೇವೆ ಮಾಡುವ ಶಕ್ತಿಯನ್ನು ಹೆಚ್ಚಿಸುತ್ತಿದೆ. ಹೆಣ್ಣುಮಕ್ಕಳ ಆರೋಗ್ಯ, ವಿದ್ಯಾಭ್ಯಾಸ, ಸುರಕ್ಷತೆ ಬಗ್ಗೆ ಗಮನಹರಿಸುತ್ತೇನೆ. ಕಷ್ಟಪಟ್ಟು ಓದಿ ಕುಟುಂಬಕ್ಕೆ, ಸಮಾಜಕ್ಕೆ ಕೀರ್ತಿ ತರುವ ಗುರಿ ನಿನ್ನದಾಗಲಿ ಎಂದು ಹೇಳಿದ್ದಾರೆ.
ರ್ಯಾಲಿ ವೇಳೆ ಬಾಲಕಿ ನರೇಂದ್ರ ಮೋದಿ ಫೋಟೊ ತೋರಿಸುತ್ತಿದ್ದಳು, ಇದನ್ನು ಗಮನಿಸಿದ ಪ್ರಧಾನಿ, ನಾನು ನಿನ್ನ ಚಿತ್ರ ನೋಡಿದ್ದೇನೆ, ತುಂಬಾ ಚೆನ್ನಾಗಿದೆ, ನನ್ನ ಆಶೀರ್ವಾದ ನಿನ್ನ ಮೇಲಿದೆ, ತುಂಬಾ ಹೊತ್ತಿನಿಂದ ನಿಂತಿದ್ದೀಯ, ಕುಳಿತುಕೋ ಎಂದು ಹೇಳಿದ್ದರು.
ಚಿತ್ರದ ಹಿಂಬದಿಯಲ್ಲಿ ವಿಳಾಸ ಬರೆದು ಪೊಲೀಸರಿಗೆ ಚಿತ್ರ ನೀಡುವಂತೆ ಸೂಚಿಸಿ, ಪತ್ರ ಬರೆದು ಉತ್ತರಿಸುತ್ತೇನೆ ಎಂದು ಹೇಳಿದ್ದರು.