ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ಪಠಾಣ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ರು, ಅದು ಬಿಗ್ ಹಿಟ್ ಆದ ನಂತರ ಜವಾನ್ ಬಾಕ್ಸ್ ಆಫೀಸ್‌ನ್ನು ಅಲ್ಲೋಲ ಕಲ್ಲೋಲ ಮಾಡಿತ್ತು.
ಇದೀಗ ಈ ಸರದಿ ಡಂಕಿ ಸಿನಿಮಾದ್ದು, ಕ್ಲಾಸ್ ಹೀರೋ ಆಗಿ ಡಂಕಿಯಲ್ಲಿ ಶಾರುಖ್ ಕಾಣಿಸಿಕೊಂಡಿದ್ದು, ಟೀಸರ್‌ಗೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಪಠಾಣ್, ಜವಾನ್ ಮಾಸ್ ಸಿನಿಮಾಗಳಾಗಿದ್ದು, ಡಂಕಿ ಸಿನಿಮಾದ ಸ್ಟೋರಿ ಲೈನ್ ಇವುಗಳಿಗೆ ಮ್ಯಾಚ್ ಆಗುವಂತಿಲ್ಲ. ಶಾರುಖ್ ಜನ್ಮದಿನದಂದು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಡಂಕಿ ಟೀಸರ್ ರಿಲೀಸ್ ಮಾಡಿದ್ದು, ಒಟ್ಟಾರೆ ನಾಲ್ಕು ಕೋಟಿ ಮಿಲಿಯನ್ ವ್ಯೂಸ್ ಕಂಡಿದೆ. ಈ ವರ್ಷದಲ್ಲಿ ಅತಿ ಹೆಚ್ಚು ವ್ಯೂಸ್ ಪಡೆದ ಟೀಸರ್ ಡಂಕಿ.
ಹಿರಾನಿ ಸಿನಿಮಾಗಳಲ್ಲಿ ಯಾವಾಗ್ಲು ಕಥೆಯೇ ಹೀರೋ, ಈ ಬಾರಿ ಕೂಡ ಇಂಥದ್ದೇ ಅದ್ಭುತ ಕಟ್ಟಿಕೊಟ್ಟಿದ್ದಾರೆ, ಜವಾನ್, ಪಠಾಣ್‌ಗಿಂತ ನಿಮಗೆ ಹೆಚ್ಚು ಮನರಂಜನೆ ಸಿಗಲಿದೆ ಎಂದು ಶಾರುಖ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.