ಮೋದಿ ಬಾಲ್ಯದ ಬಡತನ ಇಂದಿನ ಅವರ ಜನಪರ ಯೋಜನೆಗಳಿಗೆ ಪ್ರೇರಣೆ: ‘ಮೋದಿ@20’ ಪುಸ್ತಕ ಬಿಡುಗಡೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತಿನ ಮುಖ್ಯಮಂತ್ರಿಯಾಗಿ ನಂತರ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಈವರೆಗೆ ನೀಡಿರುವ ಆಡಳಿತಾವಧಿ ಭರ್ಜರಿ 20 ವರ್ಷಗಳಿಗೆ ಆವರಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಿರುವವರೂ ಸೇರಿದಂತೆ ನಾನಾ ಕ್ಷೇತ್ರಗಳ ನೀತಿ ನಿರೂಪಕರು ನರೇಂದ್ರ ಮೋದಿಯವರ ವ್ಯಕ್ತಿತ್ವವನ್ನು ಹಿಡಿದಿಟ್ಟಿರುವ ಲೇಖನಗಳ ಸಂಗ್ರಹ ‘ಮೋದಿ@20’ ಪುಸ್ತಕ ಹೊರಬಂದಿದೆ.
ಈ ಪುಸ್ತಕವನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸುವ ಸಮಾರಂಭದಲ್ಲಿ ರಾಜ್ಯಪಾಲ ಥಾವರ ಸಿಂಗ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನರೇಂದ್ರ ಮೋದಿ ವ್ಯಕ್ತಿತ್ವವನ್ನು ಹೀಗೆ ಕಟ್ಟಿಕೊಟ್ಟರು.
• ಬಾಲ್ಯದಲ್ಲಿ ನರೇಂದ್ರ ಮೋದಿ ಎದುರಿಸಿದ ಬಡತನ ಮತ್ತು ಬದುಕಿನ ಸವಾಲುಗಳು ಈಗ ಅವರು ಹಲವು ಬಡವರ ಪರ ಯೋಜನೆಗಳನ್ನು ರೂಪಿಸುವುದಕ್ಕೆ ಪ್ರೇರಕವಾಗಿದೆ. ರಾಮಕೃಷ್ಣ ಪರಮಹಂಸರ ಮೌಲ್ಯ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದರ್ಶಗಳನ್ನು ರೂಢಿಸಿಕೊಂಡು ಬೆಳೆದವರು ಮೋದಿ.
• ಬಡತನದ ಬಗ್ಗೆ ಅವರಿಗಿರುವ ಅನುಭವ ಮತ್ತು ಅರಿವುಗಳೇ ಇಂದು ಸರ್ಕಾರದಿಂದ ಬಿಡುಗಡೆಯಾದ ಒಂದು ರೂಪಾಯಿಯಲ್ಲಿ ಕೇವಲ 15 ಪೈಸ ಫಲಾನುಭವಿಗೆ ತಲುಪುವ ದಿನಗಳನ್ನು ಇಲ್ಲವಾಗಿಸಿದೆ. ನೇರ ನಗದು ವರ್ಗಾವಣೆ ಮೂಲಕ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳಿಗೆ ಯೋಜನೆ ಲಾಭ ತಲುಪುತ್ತಿದೆ.
• ತಮ್ಮ ಮೊದಲ ಭಾಷಣದಲ್ಲಿಯೇ ಸ್ವಚ್ಛ್ ಭಾರತ್ ಬಗ್ಗೆ ಮಾತನಾಡಿ, ದೇಶದ ಜನತೆಗೆ ಸ್ವಚ್ಛ ಭಾರತದ ಬಗ್ಗೆ ಜಾಗೃತಿ ಮೂಡಿಸಿದವರು ಪ್ರಧಾನಿ ನರೇಂದ್ರ ಮೋದಿ.
• ಈ ಹಿಂದೆ ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲಿ, ಕರ್ನಾಟಕದ N.T.T.F ಬಗ್ಗೆ ತಿಳಿದು, ಗುಜರಾತ್ ನಲ್ಲಿ ಎರಡು ದಿನಗಳೊಳಗೆ ಅಲ್ಲಿ ಸಂಸ್ಥೆ ಆರಂಭಿಸಲು ಸಕಲ ಸೌಕರ್ಯ ಮಾಡಿಕೊಟ್ಟರು. ಇದು ಮೋದಿಯವರ ಕಾರ್ಯತತ್ಪರತೆಗೆ ಸಾಕ್ಷಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!