ರಾಮ ಮಂದಿರದೊಂದಿಗೆ ಮೋದಿ ಹೆಸರು ಅಜರಾಮರ: ಪ್ರಧಾನಿಗೆ ನಟಿ ಶಿಲ್ಪಾ ಶೆಟ್ಟಿ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 500 ವರ್ಷಗಳ ಹೋರಾಟದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಿ ಲೋಕಾರ್ಪಣೆಗೊಂಡಿದೆ.ಇಡೀ ದೇಶವೇ ಸಂಭ್ರಮದಲ್ಲಿ ಮುಳುಗಿದೆ.

ಇದೀಗ ಮಂದಿರ ಲೋಕಾರ್ಪಣೆಗೊಂಡು ತಿಂಗಳಾಗುತ್ತಾ ಬಂದಿದೆ. ಇದರ ನಡುವೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಧಾನಿ ನರೇಂದ್ರ ಮೋದಿಗೆ ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕುರಿತು ಪತ್ರ ಬರೆದಿದ್ದಾರೆ.

500 ವರ್ಷಗಳಿಂದ ಮಣ್ಣಾಗಿದ್ದ ಇತಿಹಾಸವನ್ನು ಪುನರುತ್ಥಾನಗೊಳಿಸಿದ ಪ್ರಧಾನಿ ಮೋದಿ ಹೆಸರು ಅಜರಾಮರ ಎಂದು ಶಿಲ್ಪಾ ಶೆಟ್ಟಿ ಬಣ್ಣಿಸಿದ್ದಾರೆ.

ಆಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಪ್ರಧಾನಿ ಮೋದಿ ನಾಯಕತ್ವವನ್ನು ಶಿಲ್ಪಾ ಶೆಟ್ಟಿ ಹಾಡಿ ಹೊಗಳಿದ್ದಾರೆ. ಪ್ರಧಾನಿ ಮೋದಿ ನಾಯಕತ್ವದಿಂದ ಭವ್ಯ ರಾಮ ಮಂದಿರ ಶ್ರೀರಾಮ ಜನ್ಮಭೂಮಿಯಲ್ಲಿ ತಲೆ ಎತ್ತಿದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ಕೆಲವರು ಇತಿಹಾಸ ಓದುತ್ತಾರೆ. ಹಲವರು ಅದರಿಂದ ಕಲಿಯುತ್ತಾರೆ. ನಿಮ್ಮಂತಹ ವ್ಯಕ್ತಿಗಳಿಂದ ಹುದುಗಿ ಹೋಗಿರುವ ಇತಿಹಾಸವನ್ನು ಮರುಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತಾರೆ. ರಾಮಜನ್ಮಭೂಮಿಯಲ್ಲಿ 500 ವರ್ಷಗಳ ಇತಿಹಾಸವನ್ನು ಮತ್ತೆ ಹೊಸ ಅಧ್ಯಾಯದೊಂದಿಗೆ ಬರೆದಿದ್ದೀರಿ. ಇದಕ್ಕಾಗಿ ನಾನು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹೆಸರು ರಾಮ ಮಂದಿರದೊಂದಿಗೆ ಅಜರಾಮರ. ಈ ಮಹತ್ತರ ಸಾಧನೆ ಮಾಡಿ ನಮಗೆ ಶ್ರೀರಾಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಪ್ರಧಾನಿ ಮೋದಿಗೆ ಧನ್ಯವಾದ ಎಂದು ಶಿಲ್ಪಾ ಶೆಟ್ಟಿ ಪತ್ರದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!