ಸಿಲಿಕಾನ್‌ ಸಿಟಿಯಲ್ಲಿ ಮೋದಿ ರೋಡ್‌ ಶೋಗೆ ತೆರೆ: ಹೆಚ್​ಎಎಲ್​ ಏರ್​ಪೋರ್ಟ್​ನತ್ತ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎರಡನೇ ದಿನದ ಪ್ರಧಾನಿ ರೋಡ್‌ ಶೋಗೆ ತೆರೆ ಬಿದ್ದಿದೆ. ನಿನ್ನೆಯಿಂದ ಸಿಲಿಕಾನ್‌ ಸಿಟಿಯಲ್ಲಿ ಕೇಸರಿ ರಣಕಹಳೆ ಮೊಳಗಿದ್ದು  ಪ್ರಧಾನಿಯವರು ಒಟ್ಟು 36ಕಿಮೀ ರೋಡ್‌ ಶೋ ಮೂಲಕ ತಮ್ಮ ಅಭ್ಯರ್ಥಿಗಳ ಪರ ಮತಪ್ರಚಾರ ನಡೆಸಿದರು.

ಇಂದು ನ್ಯೂ ತಿಪ್ಪಸಂದ್ರದಿಂದ ಟ್ರಿನಿಟಿ ಸರ್ಕಲ್‌ವರೆಗೆ ಆರು ಕಿಮೀ ರೋಡ್‌ ನಡೆಸಿದ್ದು, ರಸ್ತೆಯುದ್ಧಕ್ಕೂ ಪ್ರಧಾನಿಯವರಿಗೆ ಗೌರವಪೂರಕ ಸ್ವಾಗತ ಸಿಕ್ಕಿದೆ. ರಸ್ತೆ ಇಕ್ಕೆಲಗಳಲ್ಲಿ ಪ್ರಧಾನಿಯವರಿಗೆ ಹೂಗಳ ಸುರಿಮಳೆಯಾಯಿತು. ಇದೇ ಸಂದರ್ಭದಲ್ಲಿ ನೂರಾರು ಪಂಡಿತರು ಹನುಮಾನ್ ಚಾಲೀಸ ಮಂತ್ರ ಪಠಣೆ ಮಾಡಿದರು. ಹಲವಾರು ಕಲಾ ತಂಡಗಳಿಂದ ರೋಡ್‌ ಶೋಗೆ ಮತ್ತಷ್ಟು ಮೆರಗು ಸಿಕ್ಕಿತ್ತು. ಇನ್ನೂ ಮಾರ್ಗಮಧ್ಯೆ ದಿವಂಗತ ನಟ ಶಂಕರ್‌ನಾಗ್‌ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

ಅದ್ದೂರಿ ರೋಡ್‌ ಶೋ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಹೆಚ್‌ಎಎಲ್‌ ಏರ್‌ಪೋರ್ಟ್‌ನತ್ತ ತೆರಳಿದ್ದಾರೆ. ಇಂದು ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಪ್ರಧಾನಿ ಪ್ರಚಾರ ಸಭೆಯಲ್ಲಿ ನಮೋ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!