ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಎಲ್2: ಎಂಪುರಾನ್’ ಸಿನಿಮಾ ಬಿಗ್ ಸಕ್ಸಸ್ ಪಡೆದಿದ್ದು, ವಿಶ್ವ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಲಯಾಳಂ ಚಿತ್ರ ಒಂದು ಗಲ್ಲಾ ಪೆಟ್ಟಿಗೆಯಲ್ಲಿ ಇಷ್ಟು ಗಳಿಕೆ ಮಾಡಿದ್ದು ಇದೇ ಮೊದಲು.
ಇತ್ತ ಈ ಚಿತ್ರ ಗೆಲ್ಲುತ್ತಿದ್ದಂತೆ ಮೋಹನ್ಲಾಲ್ ನಟನೆಯ ಮತ್ತೊಂದು ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದಾರೆ.
ಮೋಹನ್ಲಾಲ್ ‘ಎಂಪುರಾನ್’ ಹಿಟ್ ಆಗುತ್ತಿದ್ದಂತೆ, ‘ತುಡರುಮ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಸಿನಿಮಾ ಏಪ್ರಿಲ್ 25ರಂದು ತೆರೆಗೆ ಬರಲಿದೆ.
ಟ್ವಿಟರ್ ಮೂಲಕ ಮೋಹನ್ಲಾಲ್ ಈ ಮಾಹಿತಿ ನೀಡಿದ್ದಾರೆ. ‘ನಾವು ಆಗಸ್ಟ್ 25ರಂದು ಬರುತ್ತಿದ್ದೇವೆ’ ಎಂದು ಹೇಳಿರೋ ಮೋಹನ್ಲಾಲ್ ಅವರು, ‘ತುಡರುಮ್’ ರಿಲೀಸ್ ದಿನಾಂಕ ರಿವೀಲ್ ಮಾಡಿದ್ದಾರೆ.
ಈ ಚಿತ್ರವನ್ನು ತರುಣ್ ಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ. ಮೋಹನ್ಲಾಲ್ ಅವರು ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಣ್ಮುಗನ್ ಅನ್ನೋದು ಪಾತ್ರದ ಹೆಸರು. ಶೋಭನಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.