ಇಲ್ಲಿ ಕಂಡಿತು ಮೊಹರಂ ಹಬ್ಬಕ್ಕೆ ರಾಷ್ಟ್ರಭಕ್ತಿಯ ಟಚ್: ತಾಬೂತ್‌ಗೆ ತ್ರಿವರ್ಣಗಳ ಅಲಂಕಾರ!

ಹೊಸದಿಗಂತ ವರದಿ ಯಲ್ಲಾಪುರ:

ತಾಲೂಕಿನಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವುದರೊಂದಿಗೆ ರಾಷ್ಟ್ರ ಭಕ್ತಿ ಯನ್ನು ಮೆರೆದು ಮಾದರಿಯಾಗಿದ್ದಾರೆ. ತಾಲೂಕಿನ ಕಿರವತ್ತಿಯ ಜಯಂತಿ ನಗರದಲ್ಲಿ ಮೊಹರಂ ದೇವರ ತಾಬೂತ್‌ ಅನ್ನು ರಾಷ್ಟ್ರಧ್ವಜದ ಮಾದರಿಯಲ್ಲಿ ಹೂವಿನ ಅಲಂಕಾರ ಮಾಡಿದ್ದು ವಿಶೇಷವಾಗಿದೆ.

ಕೇಸರಿಗೆ ಚಂಡು ಹೂವು, ಬಿಳಿಗೆ ಮಲ್ಲಿಗೆ, ಹಸಿರುಗೆ ಎಲೆಗಳನ್ನು ಬಳಸಿ ಬಣ್ಣಗಳ ರಂಗನ್ನು ನೈಸರ್ಗಿಕವಾಗಿಯೇ ನೀಡಿದ್ದು ಮಧ್ಯದಲ್ಲಿ ಅಶೋಕ ಚಕ್ರವನ್ನು ಅಂಟಿಸಲಾಗಿದೆ. ಕಿರವತ್ತಿಯ ಗ್ರಾ.ಪಂ. ಸದಸ್ಯ ರೆಹಮಾತ್ ಅಬ್ಬಿಗೇರಿ ನೇತೃತ್ವದಲ್ಲಿ ಅಲಂಕಾರ ಮಾಡಲಾಗಿದೆ. ಈರೀತಿ ಅಜಾದಿ ಕಾ ಅಮೃತ ಮಹೋತ್ಸವ ವರ್ಷದ ಮೊಹರಂ ಹಬ್ಬವನ್ನು ರಾಷ್ಟ್ರ ಪ್ರೇಮದೊಂದಿಗೆ ಆಚರಿಸುತ್ತಿರುವದಕ್ಕೆ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ವಿಲ್ಸ್ ಫರ್ನಾಂಡಿಸ್ ಸೇರಿದಂತೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿರಾಷ್ಟ್ರ ಧ್ವಜದ ಮಾದರಿಯ ತಾಬೂತ್ ಕಣ್ತುಂಬಿಕೊಂಡು ಪ್ರಶಂಸಿಸುತ್ತಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!