ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂದಿನ ತ್ರಿಪುರಾ ರಾಜ್ಯದ ಧರ್ಮನಗರದ ಅಶ್ವಿನಿಕುಮಾರ್ ರಾಯ್ ಅವರ ಮಗ ಮೋಹಿನಿಮೋಹನ್ ರಾಯ್ (1915 – 1931) ಅಭೋಯ್ ಆಶ್ರಮದೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದರು. ಈ ಸಮಾಜ ಕಲ್ಯಾಣ ಸಂಸ್ಥೆಯನ್ನು ಸ್ವದೇಶಿ ಚಳುವಳಿಯ ಸಂದರ್ಭದಲ್ಲಿ ಪ್ರಫುಲ್ಲಚಂದ್ರ ಘೋಷ್ ಅವರು ಡಾ. ಸುರೇಶ್ಚಂದ್ರರೊಂದಿಗೆ ಸೇರಿ ಸ್ಥಾಪಿಸಿದ್ದರು. ಅನುಶೀಲನ್ ಸಮಿತಿಯಿಂದ ಸ್ಫೂರ್ತಿ ಪಡೆದ ಈ ಸಂಸ್ಥೆಯು ಆ ನಂತರದ ದಿನಗಳಲ್ಲಿ ಕ್ರಾಂತಿಕಾರಿ ಚಳುವಳಿಗೆ ಬೆಂಬಲ ನೀಡಲಾರಂಭಿಸಿತು. ಆ ಬಳಿಕ ಭೂಗತ ಕ್ರಾಂತಿಕಾರಿಗಳಿಗೆ ಆಶ್ರಯವಾಗಿಯೂ ಕಾರ್ಯನಿರ್ವಹಿಸಿತು. 15 ರ ಹರೆಯದ ಹುಡುಗ ಮೋಹಿನಿಮೋಹನ್ ಈ ಸಂಸ್ಥೆಯ ಚಟುವಟಿಕೆಗಳಿಂದ ಸ್ಫೂರ್ತಿ ಪದು ಸ್ವಾತಂತ್ರ್ಯ ಹೋರಾಟಕ್ಕಿಳಿದ.
ಆ ಬಳಿಕ ಬಂಗಾಳದ 24-ಪರಗಣ ಜಿಲ್ಲೆಯಲ್ಲಿ ಹೋರಾಟದಲ್ಲಿ ತೊಡಗಿಕೊಂಡ ಮೋಹಿನಿಮೋಹನ್ ರಾಯ್ 1930-31ರಲ್ಲಿ ನಡೆದ ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಪೊಲೀಸರಿಂದ ಬಂಧಿಸಲ್ಪಟ್ಟರು. ಆಂದೋಲನದಲ್ಲಿ ಭಾಗವಹಿಸಿದ ಇತರ ಅನೇಕ ಸಹವರ್ತಿಗಳಂತೆ, ಅವರನ್ನು ಬರಾಸತ್ ಉಪ-ಜೈಲಿನಲ್ಲಿ ಬಂಧನದಲ್ಲಿ ಇರಿಸಲಾಯಿತು. ಅಲ್ಲಿ ಬಾಲಕ ಮೋಹಿನಿಮೋಹನನು ಬ್ರಿಟೀಷ್ ಪೊಲೀಸರು ನೀಡುತ್ತಿದ್ದ ಚಿತ್ರಹಿಂಸೆ ತಾಳಲಾರದೆ ಮರಣಹೊಂದಿದನು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ