ದಿನಭವಿಷ್ಯ | ನಿಮ್ಮ ಭವಿಷ್ಯಕ್ಕೆ ಪ್ರತಿಕೂಲವಾದ ಯೋಜನೆ ಕೈಬಿಡುವುದೇ ಲೇಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ಹಿರಿಯರ ಜತೆ ಮಾತಿನಲ್ಲಿ ಎಚ್ಚರವಿರಲಿ. ಬೇಕಾಬಿಟ್ಟಿ ಮಾತು ತಪ್ಪರ್ಥ ಕಲ್ಪಿಸಬಹುದು. ಮನೆಯಲ್ಲಿ ಸೌಹಾರ್ದ ಬಾಂಧವ್ಯ ಕದಡದಂತೆ ನೋಡಿಕೊಳ್ಳಿ.

ವೃಷಭ
ಉತ್ತಮ ಸಂಬಂಧ ಕಾಯ್ದುಕೊಳ್ಳಲು ಆದ್ಯತೆ ಕೊಡಿ. ನಿಮ್ಮ ನಡೆನುಡಿ ಕೆಲವರಿಗೆ ಅಹಿತ ಎನಿಸಬಹುದು. ಯಾರನ್ನೂ ಎದುರು ಹಾಕಿಕೊಳ್ಳದಿರಿ.

ಮಿಥುನ
ಹಿತಮಿತ ಆಹಾರ ಅನುಸರಿಸಿರಿ. ಇಲ್ಲವಾದರೆ ಅಜೀರ್ಣದಂತಹ ಸಮಸ್ಯೆ ಕಾಡಬಹುದು. ವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ.

ಕಟಕ
ನಿಮ್ಮ ಭವಿಷ್ಯಕ್ಕೆ ಪ್ರತಿಕೂಲವಾದ ಯೋಜನೆ ಕೈಬಿಡುವುದೇ ಲೇಸು. ಅದರಲ್ಲಿ ಹಠದಿಂದ ಮುಂದುವರಿಯದಿರಿ. ಹಿತೈಷಿಗಳ ಸಲಹೆ ಕೇಳಿ.

ಸಿಂಹ
ಹಲವಾರು ಕೆಲಸ ಮುಗಿಸಬೇಕಾದ ಒತ್ತಡ.  ಅದನ್ನು ಮುಗಿಸಲು ಆದ್ಯತೆ ಕೊಡಿ. ಸಂಗಾತಿ ಜತೆಗೆ ಅನುನಯದಿಂದ ವರ್ತಿಸಿ. ಸಣ್ಣ ಮಾತು ಒಡಕು ಸೃಷ್ಟಿಸದಿರಲಿ.

ಕನ್ಯಾ
ನಿಮ್ಮ ದೇಹ ವಿಶ್ರಾಂತಿ ಅಪೇಕ್ಷಿಸಬಹುದು. ಅದಕ್ಕೆ ಕಾರಣ ಬಿಡುವಿಲ್ಲದ ನಿಮ್ಮ ಕಾರ್ಯವ್ಯವಹಾರ. ಒತ್ತಡ ನಿಭಾಯಿಸಲು ಹೆಣಗುವಿರಿ.

ತುಲಾ
ಕಠಿಣ ಕಾರ್ಯವನ್ನೂ ಸುಗಮವಾಗಿ ನೆರವೇರಿಸುವಿರಿ. ಆಪ್ತರೊಂದಿಗೆ ಕಾಲ ಕಳೆಯುವ ಅವಕಾಶ. ಆರೋಗ್ಯಕ್ಕೆ ಹಿತವಲ್ಲದ ಆಹಾರ ಸೇವಿಸದಿರಿ.

ವೃಶ್ಚಿಕ
ನಿಮ್ಮ ನಿಯಂತ್ರಣಕ್ಕೆ ಮೀರಿದ ವ್ಯವಹಾರದಲ್ಲಿ ತೊಡಗದಿರಿ. ಅದರಿಂದ ನಿಮಗೆ ಹಿನ್ನಡೆಯೇ ಆದೀತು. ಆಸ್ತಿಗೆ ಸಂಬಂಧಿಸಿ ವಿವಾದ ಉಂಟಾದೀತು.

ಧನು
ಮನೆಯಲ್ಲೂ ವೃತ್ತಿ ಕ್ಷೇತ್ರದಲ್ಲೂ ಒತ್ತಡದ ದಿನ. ಹಲವು ಹೊಣೆಗಾರಿಕೆ ನಿಭಾಯಿಸಬೇಕಾದ ಧಾವಂತ. ಸಹನೆಯಿಂದ ವರ್ತಿಸಿರಿ.

ಮಕರ
ನಿಮ್ಮ ಕಾರ್ಯಕ್ಕೆ ಅನುಭವಿಗಳ ನೆರವು ಬೇಕಾದೀತು. ಅದನ್ನು ಪಡೆಯಲು ಹಿಂಜರಿಕೆ ಬೇಡ. ಕೌಟುಂಬಿಕ ಭಿನ್ನಾಭಿಪ್ರಾಯ ಉಂಟಾಗಬಹುದು

ಕುಂಭ
ಆರೋಗ್ಯಕ್ಕೆ ಸಂಬಂಧಿಸಿ ಆತಂಕ ಮೂಡಬಹುದು. ಅವಶ್ಯ ಬಿದ್ದರೆ ವೈದ್ಯರನ್ನು ಕಾಣಿರಿ. ಅನಿರೀಕ್ಷಿತ ಖರ್ಚು ಒದಗಿ ಬರುವುದು.

ಮೀನ
ಅತಿರೇಕದ ಭಾವನೆ ಕಾಡಬಹುದು. ಪ್ರೀತಿಯಾಗಲಿ, ದ್ವೇಷವಾಗಲಿ ಅತಿಯಾಗಿ ವರ್ತಿಸುವಿರಿ. ಸಂಯಮ ಸಾಧಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!