ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರ ಲೋಕಾರ್ಪಣೆ ಸಲುವಾಗಿ ಪ್ರಧಾನಿ ಮೋದಿ ಕಟ್ಟುನಿಟ್ಟಿನ 11 ದಿನದ ವ್ರತವನ್ನು ಕೈಗೊಂಡಿದ್ದರು.
ಈ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಎಳನೀರು ಮಾತ್ರ ಕುಡಿದುಕೊಂಡು ಯಾರೇ ಆಗಲಿ 11 ದಿನ ಇರಲಿ ಸಾಧ್ಯವಾ? ಒಂದೆರಡು ದಿನಕ್ಕೆ ಸುಸ್ತಾಗೋದಿಲ್ವಾ? ವೈದ್ಯರ ಪ್ರಕಾರ 11 ದಿನ ಬರೀ ಎಳನೀರು ಕುಡಿದು ಇರೋದು ಅಸಾಧ್ಯ. ಸುಸ್ತಾಗಿರಬೇಕಿದ್ದ ಪ್ರಧಾನಿ ಮೋದಿ ಎಲ್ಲೆಡೆ ಓಡಾಡಿಕೊಂಡು ಕ್ಯಾಮೆರಾ ಮುಂದೆ ಕಾಣಿಸಿದ್ರು. ಅವರನ್ನು ನೋಡಿದ್ರೆ ಉಪವಾಸ ಮಾಡುವವರ ರೀತಿ ಕಾಣಲಿಲ್ಲ ಎಂದಿದ್ದಾರೆ.