ನಮ್ಮ ಮುಖದ ಮೇಲೆ ಯಾವ ರೀತಿಯ ಮಚ್ಚೆಗಳು ಇವೆ, ಎಲ್ಲಿ ಮಚ್ಚೆಗಳು ಇವೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧರಿತವಾಗಿರುತ್ತದೆ.
ಹಣೆಯ ಮೇಲೆ ಮಚ್ಚೆ ಇರುವವರ ಜೀವನವು ಹೋರಾಟಗಳಿಂದ ತುಂಬಿರುತ್ತದೆಯಂತೆ. ಇಂತಹ ವ್ಯಕ್ತಿಗಳು ಈ ಹೋರಾಟಗಳ ನಂತರ, ತಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಆದ್ದರಿಂದಲೇ ಹಣೆಯ ಮೇಲೆ ಮಚ್ಚೆ ಇರುವವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.
ಕೆನ್ನೆಯ ಮೇಲಿನ ಮಚ್ಚೆಯನ್ನು ಸೌಂದರ್ಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಕೆನ್ನೆಯ ಮೇಲೆ ಮಚ್ಚೆ ಇರುವ ಜನರು ಸಾಮಾನ್ಯವಾಗಿ ಹರ್ಷಚಿತ್ತದಿಂದ ಇರುತ್ತಾರೆ. ಅವರಿಗೆ ತಮ್ಮ ಮೇಲೆ ವಿಶ್ವಾಸವನ್ನಿಟ್ಟಿರುತ್ತಾರೆ.
ಮೂಗಿನ ಮೇಲೆ ಮಚ್ಚೆ ಇರುವ ಜನರು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಮತ್ತು ಆಗಾಗ್ಗೆ ಎಲ್ಲಿಗಾದರೂ ಪ್ರಯಾಣಿಸಲು ಉತ್ಸುಕರಾಗಿರುತ್ತಾರೆ. ಅವರ ಈ ಸ್ವಭಾವವು ಅವರಿಗೆ ಜೀವನದಲ್ಲಿ ಅನೇಕ ಹೊಸ ಹೊಸ ಅನುಭವಗಳನ್ನು ನೀಡುತ್ತದೆ.
ಮೂಗಿನ ಕೆಳಗೆ ಮತ್ತು ತುಟಿಯ ಮೇಲ್ಭಾಗದಲ್ಲಿ ಮಚ್ಚೆ ಇರುವ ಜನರು ತಮ್ಮ ಜೀವನದಲ್ಲಿ ಕಟ್ಟುನಿಟ್ಟಿನ ಶಿಸ್ತನ್ನು ಅನುಸರಿಸುತ್ತಾರಂತೆ. ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದರೂ, ಅವರು ತಮ್ಮ ಶಿಸ್ತಿನೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲವಂತೆ. ಮತ್ತು ಅವರ ಈ ವ್ಯಕ್ತಿತ್ವವು ಅವರನ್ನು ಇತರರಿಗಿಂತ ಭಿನ್ನವಾಗಿರುಂತೆ ಮಾಡುತ್ತದೆ.
ತುಟಿಯ ಮೇಲೆ ಮಚ್ಚೆ ಇರುವ ಜನರು ತುಂಬಾ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವವರಾಗಿರುತ್ತಾರೆ. ಮಾತನಾಡುವ ಶೈಲಿ, ಜೀವನಶೈಲಿಯಿಂದ ಹಿಡಿದು ಕೆಲಸದವರೆಗೆ ಇವರ ಎಲ್ಲಾ ನಡೆಗಳು ಜನರನ್ನು ಆಕರ್ಷಿಸುತ್ತದೆ.
ಗಲ್ಲದ ಮೇಲೆ ಮಚ್ಚೆಯನ್ನು ಹೊಂದಿರುವವರು ದಯಾಳು ಸ್ವಭಾವದವರಾಗಿರುತ್ತಾರೆ. ಇವರು ಯಾವಾಗಲೂ ಯಶಸ್ವಿ ಮತ್ತು ಸಮತೋಲಿತ ಜೀವನವನ್ನು ನಡೆಸುವವರಾಗಿರುತ್ತಾರೆ.