October 9, 2026
Friday, October 9, 2026
spot_img

‘ಹಣ ಹೊಡೆದ ಕಳ್ಳರು’: ‘ಬಳ್ಳಾರಿ ಚಲೋ’ದಲ್ಲಿ ಕಾಂಗ್ರೆಸ್ ವಿರುದ್ಧ ಜನಾರ್ದನ ರೆಡ್ಡಿ ಕಿಡಿ

ಹೊಸದಿಗಂತ ವರದಿ ಕೊಪ್ಪಳ:

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಲೂಟಿ ಮಾಡಿದ ಕಾಂಗ್ರೆಸ್‍ನವರು ಕಳ್ಳರು. ಅದರ ಲೆಕ್ಕ ಕೇಳಿದರೆ, ಉತ್ತರ ಕೊಡಿ ಅಂದರೆ ಹುಚ್ಚರ ರೀತಿ ಮಾತನಾಡುತ್ತಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಲೇವಡಿ ಮಾಡಿದರು.

ಇಂದಿಲ್ಲಿ 5ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣವನ್ನು ಗೋವಾ ಮತ್ತು ತೆಲಂಗಾಣದಲ್ಲಿ ನಡೆದ ಚುನಾವಣೆಗೆ ಬಳಸಿದರು. ದುಡ್ಡು ಹೊಡೆದ ತಪ್ಪಿಗೆ ಇಡೀ ರಾಜ್ಯದ ಜನರ ಎದುರು ತಲೆ ಬಾಗಿಸಿ ದ್ರೋಹ ಮಾಡಿದ್ದೇವೆ ಎಂದು ಕ್ಷಮೆ ಕೇಳಲಿ. ಆಗ ದೇವರು ಇವರನ್ನು ಕ್ಷಮಿಸುತ್ತಾನೆ ಎಂದು ತಿಳಿಸಿದರು.

ಇದನ್ನೂ ಓದಿ:

ಸಚಿವ ನಾಗೇಂದ್ರ ರಾಜೀನಾಮೆ ನಂತರವೂ ಬಿಜೆಪಿಯವರು ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‍ನವರು ಟೀಕೆ ಮಾಡುತ್ತಿದ್ದಾರೆ. ನಮ್ಮ ಪಾದಯಾತ್ರೆ ಕೇವಲ ನಾಗೇಂದ್ರ ರಾಜೀನಾಮೆಗೆ ಸೀಮಿತ ಅಲ್ಲ. ಬದಲಿಗೆ ಸಮಗ್ರ ಕರ್ನಾಟಕದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಈ ಪಾದಯಾತ್ರೆ ಮಾಡುತ್ತಿದ್ದೇವೆ. ವಾಲ್ಮೀಕಿ ಸಮುದಾಯದ ಯುವಕನ ಕಾಲಿನ ದೂಳಿಗೂ ನಾಗೇಂದ್ರ ಸಮ ಅಲ್ಲ ಎಂದರು.

ವಾಲ್ಮೀಕಿ ನಿಗಮದ ಹಣ ತಿಂದ ನಾಗೇಂದ್ರ ದಲಿತ ಸಮುದಾಯದ ವಿದ್ಯಾರ್ಥಿಗಳು, ಮಹಿಳೆಯರು, ರೈತರಿಗೆ ದ್ರೋಹ ಮಾಡಿದ್ದಾನೆ. ಈಗ ನಾವು ಪ್ರಶ್ನೆ ಮಾಡಿದರೆ ಬಿಜೆಪಿಯವರು ದಲಿತ ವಿರೋಧಿ ಅಂತಾನೆ ಎಂದರು.

Must Read