ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಸಚಿವ ಅನಿಲ್ ದೇಶ್‌ಮುಖ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಒಂದು ಲಕ್ಷ ರೂ. ಶೂರಿಟಿ ಮೊತ್ತದ ಮೇಲೆ ಜಾಮೀನು ನೀಡಲಾಗಿದೆ. ಇಡಿ ಎರಡು ವಾರ ಆದೇಶದ ಕಾರ್ಯಾಚರಣೆಗೆ ತಡೆ ಕೋರಿದೆ. ಕಳೆದ ನವೆಂಬರ್‌ನಲ್ಲಿ ದೇಶ್‌ಮುಖ್‌ರನ್ನು ಬಂಧಿಸಲಾಗಿತ್ತು. ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದು, ಹೈಕೋರ್ಟ್ ಮೊರೆ ಹೋಗಲಾಗಿತ್ತು.
ಇಡಿ ಪ್ರಕರಣದಲ್ಲಿ ದೇಶ್‌ಮುಖ್‌ಗೆ ಜಾಮೀನು ಸಿಕ್ಕಿದ್ದರೂ, ಅವರ ವಿರುದ್ಧ ಸಿಬಿಐ ಪ್ರಕರಣದ ದಾಖಲಾಗಿದ್ದು, ಬಂಧನದಲ್ಲಿಯೇ ಇರುತ್ತಾರೆ.