ಅಕ್ರಮ ಹಣ ವರ್ಗಾವಣೆ: ಇಡಿಯಿಂದ ಮಧುರೈ ಸಂಸ್ಥೆಯ ರೂ. 207 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧುರೈ ಮೂಲದ ಸಂಸ್ಥೆ ನಡೆಸಿದ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ತಮಿಳುನಾಡಿನಲ್ಲಿರುವ ಅದರ 207 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಭಾನುವಾರ ತಿಳಿಸಿದೆ.

ಈ ಸಂಬಂಧ ತಮಿಳುನಾಡು ಪೊಲೀಸರ ಆರ್ಥಿಕ ಅಪರಾಧ ವಿಭಾಗ ದಾಖಲಿಸಿದ ಎಫ್ಐಆರ್ ನಿಂದ ಇಡಿ ತನಿಖೆ ನಡೆಸುತ್ತಿದ್ದು, ನಿಯೋಮ್ಯಾಕ್ಸ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಮೂಹ ಕಂಪನಿಗಳ ವಿರುದ್ಧ ಹೂಡಿಕೆದಾರರು ದೂರು ದಾಖಲಿಸಿದ ನಂತರ ಪೊಲೀಸ್ ಎಫ್ಐಆರ್ ದಾಖಲಿಸಲಾಗಿದೆ. ಹೆಚ್ಚಿನ ಆದಾಯದ ಭರವಸೆಯೊಂದಿಗೆ ಶೇ.12 ರಿಂದ 13ರಷ್ಟು ಬಡ್ಡಿಯೊಂದಿಗೆ ವಿವಿಧ ಯೋಜನೆಗಳಲ್ಲಿ (ಪ್ಲಾಟ್ ಅಭಿವೃದ್ಧಿ) ಜನರಿಂದ ಲಕ್ಷಾಂತರ ಹಣ ಪೀಕಿಸಿ ನಂತರ ವಂಚಿಸಿದ್ದಾರೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಸಾರ್ವಜನಿಕರಿಂದ ನೂರಾರು ಕೋಟಿಗಳಷ್ಟು ಹಣ ಸಂಗ್ರಹಿಸಿರುವ ಕಂಪನಿ, ನಂತರ ಆ ಹಣವನ್ನು ತನ್ನ ಇತರ ಕಂಪನಿಗಳು ಮತ್ತು ಇತರ ಘಟಕಗಳಿಗೆ ವರ್ಗಾಯಿಸುವ ಮೂಲಕ ಮೋಸ ಮಾಡಿದೆ ಎಂದು ಇಡಿ ಹೇಳಿದೆ. ಅಪರಾಧ ಮರೆಮಾಚಲು ಗುಂಪು ತನ್ನ ಖಾತೆಗಳ ಪುಸ್ತಕಗಳಲ್ಲಿ ತಿರುಚಲಾಗಿದೆ ಮತ್ತು ಕಂಪನಿಯ ಆಡಿಟರ್ ಹೇಳಿಕೆಯಲ್ಲಿ ಇದನ್ನು ಒಪ್ಪಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!