ಮಂಗೋಲಿಯಾ, ಜಪಾನ್‌ಪ್ರವಾಸ: ಹೊಸ ದಾಖಲೆ ಬರೆಯಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕಾರ್ಯತಂತ್ರ, ರಕ್ಷಣಾ ಸಂಬಂಧ ವಿಸ್ತರಿಸುವ ಭಾಗವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರದಿಂದ ಐದು ದಿನಗಳ ಕಾಲ ಮಂಗೋಲಿಯಾ, ಜಪಾನ್‌ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಮೂಲಕ ಭಾರತದ ರಕ್ಷಣಾ ಸಚಿವರೊಬ್ಬರು ಪೂರ್ವ ಏಷ್ಯಾಕ್ಕೆ ಕೈಗೊಂಡಿರುವ ಮೊಟ್ಟ ಮೊದಲ ಪ್ರವಾಸ ಎಂಬ ದಾಖಲೆ ಬರೆಯಲಿದ್ದಾರೆ.
ನಾಳೆಯಿಂದ ಸೆಪ್ಟೆಂಬರ್ 7ರ ವರೆಗೆ ಅವರು ಮಂಗೋಲಿಯಾಗೆ ಭೇಟಿ ನೀಡಲಿದ್ದಾರೆ. ಸೆ.8 ಮತ್ತು 9ರಂದು ಜಪಾನ್‌ಗೆ ಭೇಟಿ ನೀಡಲಿದ್ದಾರೆ.
ಪ್ರವಾಸದಲ್ಲಿ ಸಿಂಗ್ ಅವರಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಾಥ್ ನೀಡಲಿದ್ದು, ಜಪಾನ್ ರಕ್ಷಣಾ ಮತ್ತು ವಿದೇಶಾಂಗ ಸಚಿವರೊಂದಿಗೆ 2+2 ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!