ವಂಚನೆ ತಪ್ಪಿಸಲು ನಗದು ವ್ಯವಹಾರದ ಮೇಲೆ ನಿಗಾ: ಆಸ್ಪತ್ರೆಗಳು, ಬ್ಯಾಂಕ್ವೆಟ್ ಹಾಲ್‌ಗಳ ಮೆಲೆ ತೆರಿಗೆ ಇಲಾಖೆ ಕಣ್ಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಆದಾಯ ತೆರಿಗೆ ಇಲಾಖೆಯು ತೆರಿಗೆ ವಂಚನೆಯನ್ನು ತಡೆಯಲು ಆಸ್ಪತ್ರೆಗಳು, ಬ್ಯಾಂಕ್ವೆಟ್ ಹಾಲ್‌ಗಳು ಮತ್ತು ವ್ಯವಹಾರಗಳಲ್ಲಿ ನಗದು ವಹಿವಾಟಿನ ಮೇಲೆ ನಿಗಾ ಇಡಲಿದೆ ಎಂದು ಮೂಲಗಳು ವರದಿ ಮಾಡಿವೆ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಸಾಲ ಅಥವಾ ಠೇವಣಿಗಾಗಿ ರೂ 20,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ ಮತ್ತು ಅಂತಹ ವಹಿವಾಟುಗಳನ್ನು ಬ್ಯಾಂಕಿಂಗ್ ಮಾರ್ಗಗಳ ಮೂಲಕ ಮಾತ್ರವೇ ಮಾಡಬೇಕು. ಇದಲ್ಲದೇ ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯಿಂದ ಒಟ್ಟಾರೆಯಾಗಿ ರೂ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಸ್ವೀಕರಿಸಲು ಅನುಮತಿ ಇಲ್ಲ. ಜನರು ನೋಂದಾಯಿತ ಟ್ರಸ್ಟ್ ಅಥವಾ ರಾಜಕೀಯ ಪಕ್ಷಕ್ಕೆ ನಗದು ರೂಪದಲ್ಲಿ ನೀಡಿದ ದೇಣಿಗೆಗಳನ್ನು ಕಡಿತಗಳಾಗಿ ಸಲ್ಲಿಸುವಂತಿಲ್ಲ. ಆದರೂ ನಗದು ರೂಪದಲ್ಲಿ ಪಾವತಿಯ ಮೂಲಕ ತೆರಿಗೆ ವಂಚನೆಗಳು ವರದಿಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ಸೇರಿದಂತೆ ಕೆಲವು ಸಂಸ್ಥೆಗಳು ಮತ್ತು ವ್ಯವಹಾರಗಳಲ್ಲಿನ ನಗದು ವಹಿವಾಟಿನ ಮೇಲೆ ಇಲಾಖೆ ನಿಗಾ ಇರಿಸಿದೆ. ಅಲ್ಲದೇ ರೋಗಿಯು ದಾಖಲಾಗುವಾಗ ಸಂಗ್ರಹಿಸುವ ಮಾಹಿತಿಗಳಲ್ಲಿ ಪಾನ್‌ ಕಾರ್ಡ್‌ ಮಾಹಿತಿ ಕಲೆಹಾಕುವುದನ್ನು ಕಡೆಗಣಸಲಾಗಿದೆ ಎಂದು ತೆರಿಗೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಇದೀಗ ಆದಾಯ ತೆರಿಗೆ ಇಲಾಖೆ ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

ಖಾಸಗಿ ವೈದ್ಯಕೀಯ ಸೌಲಭ್ಯಗಳಿಗೆ ಹೆಚ್ಚಿನ ಮೊತ್ತವನ್ನು ಪಾವತಿಸಿದ ರೋಗಿಗಳನ್ನು ಪತ್ತೆಹಚ್ಚಲು ಆರೋಗ್ಯ ಸೇವೆ ಒದಗಿಸುವವರ ಡೇಟಾವನ್ನು ಬಳಸಲು ಇಲಾಖೆ ಯೋಜಿಸಿದೆ. ಸಲ್ಲಿಸಿದ ರಿಟರ್ನ್ಸ್‌ನಲ್ಲಿ ಯಾವುದೇ ವ್ಯತ್ಯಾಸವನ್ನು ಪತ್ತೆಹಚ್ಚಲು ವಾರ್ಷಿಕ ಮಾಹಿತಿ ಹೇಳಿಕೆಯಂತಹ ವಿವರವಾದ ಡೇಟಾವನ್ನು ತೆರಿಗೆ ಇಲಾಖೆ ಬಳಸಿಕೊಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!