ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದಾಪುರ ತಾಲೂಕಿನಲ್ಲಿ ಮೇ ೨೨ ರಂದು ಶತಕ ಬಾರಿಸಿದ ಮಂಗನ ಕಾಯಿಲೆ ಇದೀಗ ತನ್ನ ವರಸೆಯನ್ನು ಮುಂದುವರಿಸಿದೆ. ಕಳೆದ ಬುಧವಾರದಿಂದ ಸತತ ಮೂರು ದಿವಸಗಳ ಕಾಲವೂ ತಾಲೂಕಿನಲ್ಲಿ ಒಂದೊಂದು ಮಂಗನ ಕಾಯಿಲೆ ಪ್ರಕರಣ ಕಂಡುಬಂದಿದ್ದು, ಶುಕ್ರವಾರದವರೆಗೆ ಕಾಯಿಲೆ ಪೀಡಿತರ ಸಂಖ್ಯೆ ಬರೋಬ್ಬರಿ ೧೦೩ ತಲುಪಿದೆ.
ತಾಲೂಕಿನಲ್ಲಿ ಒಂದೆರಡು ಮಳೆ ಬಿದ್ದು ಇದೀಗ ಬಿರು ಬಿಸಿಲು ಬೀಳುತ್ತಿರುವುದೂ ಈ ಕಾಯಿಲೆ ಸುಲಭವಾಗಿ ಹರಡಲು ಕಾರಣವಾಗುತ್ತಿದೆ. ತಾಲೂಕಿನಲ್ಲಿ ಈ ವರ್ಷ ೫೮ ಪುರುಷರಿಗೆ ಹಾಗೂ ೪೫ ಮಹಿಳೆಯರಿಗೆ ಮಂಗನ ಕಾಯಿಲೆ ತಗುಲಿದ್ದು ಮೂವರು ಪುರುಷರು, ಐವರು ಮಹಿಳೆಯರು ಸೇರಿದಂತೆ ಒಟ್ಟೂ ೮ ಜನರನ್ನು ಬಲಿ ತೆಗೆದುಕೊಂಡಿದೆ.