ಜಗತ್ತಿಗೆ ಮಂಕಿ ಫಾಕ್ಸ್ ಕರಿನೆರಳು: ವಿಶ್ವ ಆರೋಗ್ಯ ಸಂಸ್ಥೆ ಆತಂಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವು ವರ್ಷಗಳ ಹಿಂದೆ ಕೊರೋನಾ ಸೋಂಕಿಗೆ ತತ್ತರಿಸಿ ಹೋಗಿದ್ದು , ಇಡೀ ಜಗತ್ತೇ ನಿಷ್ಕ್ರೀಯವಾಗಿ, ಸ್ತಬ್ಧಗೊಂಡಿತ್ತು ಈಗ ಮತ್ತೊಂದು ಭೀಕರ ಹೆಮ್ಮಾರಿ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಎಮ್ ಫಾಕ್ಸ್ ಅಥವಾ ಮಂಕಿ ಫಾಕ್ಸ್ ಸೋಂಕು ಈಗ ಆಫ್ರಿಕಾದ ಬಳಿಕ ಪಾಕಿಸ್ತಾನದಲ್ಲಿಯೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಮೂವರಲ್ಲಿ ಮಂಕಿಫಾಕ್ಸ್​ ಸೋಂಕು ದೃಢವಾಗಿದೆ. ಯುಎಇ ಯಿಂದ ಪಾಕಿಸ್ತಾನಕ್ಕೆ ಬಂದ ಮೂವರಲ್ಲಿ ಮಂಕಿ ಫಾಕ್ಸ್ ದೃಢಗೊಂಡಿದ್ದು. ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣ ಆತಂಕವಂತೂ ಉದ್ಭವಿಸಿದೆ.

ಮೊದಲಿಗೆ ಆಫ್ರಿಕಾದಲ್ಲಿ ಕಂಡು ಬಂದ ಮಂಕಿಫಾಕ್ಸ್​ 504 ಜನರನ್ನು ಈಗಾಗಲೇ ಬಲಿ ಪಡೆದಿದೆ.ಆಫ್ರಿಕಾ, ಸ್ವೀಡನ್ ಬಳಿಕ ಈಗ ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟಿರುವ ಮಂಕಿಫಾಕ್ಸ್​ ಜಾಗತಿಕವಾಗಿ ಆತಂಕ ಸೃಷ್ಟಿಸಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಈ ಮಂಕಿ ಫಾಕ್ಸ್​ನ್ನು ವರ್ಲ್ಡ್ ಹೆಲ್ತ್​ ಎಮರ್ಜೆನ್ಸಿ ಎಂದು ಘೋಷಿಸಿದೆ. ಈಗಾಗಲೇ ಈ ಕಾಯಿಲೆ 117ಕ್ಕೂ ಹೆಚ್ಚು ದೇಶಗಳಿಗೆ ಈ ಕಾಯಿಲೆ ಹರಡಿದ್ದು ದೊಡ್ಡ ಚಿಂತೆಗೆ ಕಾರಣವಾಗಿದೆ.

ಏನಿದು ಮಂಕಿ ಫಾಕ್ಸ್?
ಮಂಕಿ ಫಾಕ್ಸ್ ಅಂದ್ರೆ ಅದು ಕೂಡ ಒಂದು ವೈರಲ್ ಇನ್​ಫೆಕ್ಷನ್​. ಇದು ಸಾಮಾನ್ಯವಾಗಿ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಾಣ ಸಿಗುತ್ತದೆ. ಇದು ಸ್ಮಾಲ್​ ಫಾಕ್ಸ್​​ನ ಮತ್ತೊಂದು ತಳಿ ಇದ್ದಂತೆ. ಈಗಾಗಲೇ ಸ್ಮಾಲ್ ಫಾಕ್ಸ್​ನ್ನು ನಿರ್ಮೂಲನೆ ಮಾಡಲಾಗಿದೆ. ಅದರ ತಳಿಯಾಗಿರುವ ಈ ಮಂಕಿ ಫಾಕ್ಸ್ ಈಗ ಆತಂಕ ಸೃಷ್ಟಿಸಿದೆ. ಮಂಕಿ ಫಾಕ್ಸ್ ಅನ್ನೋದು ಚರ್ಮಕ್ಕೆ ಸಂಬಂಧಿಸಿದ ಸೋಂಕು. ಚರ್ಮದ ಮೇಲೆ ಗುಳ್ಳೆಗಳು ಏಳಲು ಶುರುವಾಗುತ್ತವೆ. ನಂತರ ಇಡೀ ಮೈಗೆ ವ್ಯಾಪಿಸಿಕೊಂಡು ಮೊಡವೆಗಳಲ್ಲಿ ಕೀವು ತುಂಬಿ ಇಲ್ಲದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದು ಮೊದಲ ಬಾರಿ 1958ರಲ್ಲಿ ಕಂಡು ಹಿಡಿಯಲಾಗಿತ್ತು. ಕೋತಿಗಳ ಮೇಲೆ ನಡೆದ ಅನೇಕ ಸಂಶೋಧನೆಗಳು ಇಂಥಹದೊಂದು ರೋಗ ಇದೆ ಅನ್ನೋದನ್ನು ತಿಳಿಸಿತ್ತು. 1970ರಲ್ಲಿ ಕಾಂಗೋದಲ್ಲಿ 9 ತಿಂಗಳ ಮಗುವಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕಾಯಿಲೆ ಕಾಣಿಸಿಕೊಂಡಿತ್ತು.

ಪ್ರಾಣಿಗಳ ಕಡಿತದಿಂದ, ಅವುಗಳ ಉಗುರಿನಿಂದ ಪರಚುವುದರಿಂದ, ಇಲ್ಲವೇ ಸೋಂಕು ಕಾಣಿಸಿಕೊಂಡವರೊಂದಿಗಿನ ಸಂಪರ್ಕದಿಂದ ಈ ಸೋಂಕು ತಗಲುತ್ತದೆ. ಸ್ನಾಯುಗಳಲ್ಲಿ ವಿಪರೀತ ನೋವು. ಮುಖ, ಕೈ, ಕಾಲುಗಳಲ್ಲಿ ಸೇರಿ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳು ಏಳುತ್ತವೆ. ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಲು ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!