ಕರಾವಳಿಯಲ್ಲಿ ಕೋತಿ ಕಾಟ: ಮಹಿಳೆಯರೇ ಇದರ ಟಾರ್ಗೆಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಕಾನಂದ ಜಿಲ್ಲೆಯ ಮಂಗಳೂರು ತಾಲೂಕಿನ ಕುಪ್ಪೆಪದವು ನೆಲ್ಲಿಜೋರ ಎಂಬಲ್ಲಿಯ ನಿವಾಸಿ ಲೀಲಾಕ್ಷಿ (65)ಎಂಬವರ ಮೇಲೆ ದಾಳಿ ನಡೆಸಿ ಕೈಗೆ ಗಂಭೀರ ಗಾಯ ಮಾಡಿರುವ ಕೋತಿರಾಯ ತನ್ನ ಉಪಟಳವನ್ನು ಮುಂದುವರಿಸಿದ್ದು ಲೀಲಾಕ್ಷಿ ಅವರ ಮನೆಯ ಕೂಗಳತೆ ದೂರದಲ್ಲಿರುವ ದಿನೇಶ್ ರಾವ್ ಎಂಬವರ ಮನೆಗೆ ದಾಳಿ ಮಾಡಿದ್ದು ಶನಿವಾರ ದಿನೇಶ್ ಅವರ ಮನೆಗೆ ಕೆಲಸಕ್ಕೆ ಬಂದಿದ್ದ ಮಹಿಳೆಯನ್ನು ಅಟ್ಟಾಡಿಸಿದ ಘಟನೆ ನಡೆದಿದ್ದು, ಮಹಿಳೆ ಕೋತಿಯಿಂದ ತಪ್ಪಿಸಿ ಬಚಾವ್ ಆಗಿದ್ದಾರೆ.

ಈ ಮದ್ಯೆ ಅರಣ್ಯ ಇಲಾಖೆ ಕೋತಿಯನ್ನು ಸೆರೆ ಹಿಡಿಯಲು ನೆಲ್ಲಿಜೋರದ ಗಣೇಶ್ ಮತ್ತು ದಿನೇಶ್ ರಾವ್ ಅವರ ಮನೆಗಳಲ್ಲಿ ಗೂಡುಗಳನ್ನು ಇರಿಸಿದ್ದು, ಚಾಲಾಕಿ ಕೋತಿ ಗಣೇಶ್ ಅವರ ಮನೆಯತ್ತ ಸುಳಿಯದೆ ದಿನೇಶ್ ರಾವ್ ಅವರ ಮನೆಯ ಅಂಗಳದಲ್ಲಿ ಇರಿಸಲಾದ ಗೂಡಿನೊಳಗೆ ಕೋತಿಯನ್ನು ಸೆಳೆಯಲು ಇರಿಸಲಾಗಿದ್ದ ಬಾಳೆಹಣ್ಣುಗಳನ್ನು ನಾಜೂಕಿನಿಂದ ಎಗರಿಸಿ ತಿಂದು ಪರಾರಿಯಾಗುವ ಮೂಲಕ ಅರಣ್ಯ ಇಲಾಖೆಗೆ ಚಲ್ಲೆಹಣ್ಣು ತಿನ್ನಿಸಿದೆ.

ಅಲ್ಲದೇ ಬ್ರಿ0ಡೇಲ್ ಎಂಬಲ್ಲಿ ಕಳೆದ ಕೆಲ ದಿನಗಳ ಹಿಂದೆ 7 ನೇ ತರಗತಿಯ ವಿದ್ಯಾರ್ಥಿ ಪ್ರಸಾದ್ ಎಂಬಾತನ ಕಾಲಿಗೆ ಕಚ್ಚಿ ಗಾಯಗೊಳಿಸಿದೆ ಮತ್ತು ಇಲ್ಲಿಗೆ ಸಮೀಪದ ಅಂಗಡಿಯೊಂದಕ್ಕೂ ದಾಳಿ ನಡೆಸಿತ್ತು.

ಸ್ಥಳೀಯರು ದಿನೇಶ್ ರಾವ್ ಮನೆಗೆ ಬಂದು ಕೋತಿ ಹಿಡಿಯಲು ಪ್ರಯತ್ನ ಪಟ್ಟಿದ್ದರೂ ಫಲ ನೀಡಿಲ್ಲ. ಕೋತಿಯನ್ನು ಸೆರೆ ಹಿಡಿಯುವಂತೆ ದಿನೇಶ್ ರಾವ್ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೇಳಿಕೊಂಡಿದ್ದು, ಕೋತಿ ಬಂದಾಗ ಕರೆ ಮಾಡುವಂತೆ ಹೇಳಿದ್ದಾರೆ. ಕೋತಿ ಬಂದಾಗ ಕರೆ ಮಾಡಿದರೆ ಅರಣ್ಯ ಇಲಾಖೆಯವರು ಬರುವವರೆಗೆ ಕೋತಿ ಕಾದು ಕುಳಿತುಕೊಳ್ಳುತ್ತಾದೆಯೇ ಎಂದು ದಿನೇಶ್ ರಾವ್ ಪ್ರಶ್ನಿಸಿದ್ದಾರೆ.

ಎಡಪದವಿನ ಮಡಪ್ಪಾಡಿ ಎಂಬಲ್ಲಿಂದ ಯಾರೋ ಕೋತಿಯನ್ನು ನೆಲ್ಲಿಜೋರ ಪ್ರದೇಶದಲ್ಲಿ ಬಿಟ್ಟು ಹೋಗಿದ್ದು, ಮಡಪ್ಪಾಡಿಯಲ್ಲಿ ಕೋತಿಯ ಬಾಲವನ್ನು ಯಾರೋ ತುಂಡರಿಸಿದ್ದು, ಕೋತಿ ಮನುಷ್ಯರ ಮೇಲೆ ದಾಳಿ ನಡೆಸಲು ಕಾರಣ ಎನ್ನಲಾಗಿದೆ ಅದರಲ್ಲೂ ಲುಂಗಿ ಉಟ್ಟವರನ್ನು ಮತ್ತು ಮಹಿಳೆಯರನ್ನು ಕಂಡ ಕೂಡಲೇ ಕೋತಿ ದಾಳಿಗೆ ಮುಂದಾಗುತ್ತಿದೆ ಎಂದು ದಿನೇಶ್ ರಾವ್ ಹೇಳಿದ್ದಾರೆ.

ಜನರೇ ಹೊಡೆದು ಸಾಯಿಸುವ ಮುನ್ನ ಇಲಾಖೆ ಎಚ್ಛೆತ್ತುಕೊಳ್ಳಲಿ
ಕೋತಿಯ ಉಪಟಳದಿಂದ ಬೇಸತ್ತಿರುವ ಜನ ಕೊತಿಯನ್ನು ಹೊಡೆದು ಸಾಯಿಸುವ ಸಾಧ್ಯತೆ ಇದ್ದು,ಅದಕ್ಕೂ ಮುನ್ನ ಅರಣ್ಯ ಇಲಾಖೆ ಕೊತಿಯನ್ನು ಸೆರೆ ಹಿಡಿಯಲು ಗಂಭೀರವಾಗಿ ಪ್ರಯತ್ನಿಸಬೇಕಾಗಿದೆ. ಅರಣ್ಯ ಇಲಾಖೆ ನಿರ್ಲಕ್ಷ ವಹಿಸಿ ಸಾರ್ವಜನಿಕರೇ ಕೊತಿಯನ್ನು ಬಡಿದು ಕೊಂದರೆ ಅದಕ್ಕೆ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ.ಅಲ್ಲದೇ ಕೋತಿಯ ದಾಳಿಯಿಂದ ಗಾಯಗೊಂಡಿರುವ ವರಿಗೆ ನ್ಯಾಯೋಚಿತ ಪರಿಹಾರ ಒದಗಿಸಲು ಮುಂದಾಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!