ಮಂಕಿಪಾಕ್ಸ್ ಜಾಗತಿಕ ಪಿಡುಗು: ವಿಶ್ವ ಆರೋಗ್ಯ ಸಂಸ್ಥೆಯಿಂದ ಶೀಘ್ರವೇ ಘೋಷಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಕಿಪಾಕ್ಸ್‌ನ್ನು ಜಾಗತಿಕ ಪಿಡುಗೆಂದು ಘೋಷಿಸಲು ಡಬ್ಲ್ಯೂಎಚ್‌ಒ ತೀರ್ಮಾನಿಸಿದೆ. ಈ ವಿಚಾರವಾಗಿ ಒಂದೇ ವಾರದಲ್ಲಿ ನಡೆದ ಸಂಘಟನೆಯ ತುರ್ತು ಸಮಿತಿಯ ದ್ವಿತೀಯ ಸಭೆಯಲ್ಲಿ ಪ್ರಸ್ತುತ ನಿರ್ಧಾರ ಕೈಗೊಳ್ಳಲಾಯಿತು. ಆಫ್ರಿಕಾದಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಒಂದು ರೀತಿಯಿದ್ದರೆ, ಸಂಪನ್ನ ರಾಷ್ಟ್ರಗಳಲ್ಲಿ ಮಗದೊಂದು ಬಗೆಯಿದೆ. ಹಾಗಾಗಿ ಈ ಬಗ್ಗೆ ಸಮನ್ವಯದ ತೀರ್ಮಾನಕ್ಕೆ ಬರುವುದು ಕಷ್ಟ ಎಂದು ಕೆಲವು ವಿಜ್ಞಾನಿಗಳು ಸಭೆಯಲ್ಲಿ ಅಭಿಪ್ರಾಯ ಪಟ್ಟರು.

ಆಫ್ರಿಕಾದಲ್ಲಿ ಮಂಕಿಪಾಕ್ಸ್‌ನ್ನು ತುರ್ತು ಪಿಡುಗೆಂದು ಘೋಷಿಸಲಾಗಿದೆ. ಇದೇ ವೇಳೆ ಯುರೋಪ್ , ಉತ್ತರ ಅಮೆರಿಕ ಮತ್ತಿತರೆಡೆ ಜನರ ಮೇಲೆ ವೈರಸ್ ಪರಿಣಾಮ ಲಘುವಾಗಿದೆ. ವೈರಸ್‌ಗಳ ನಿಯಂತ್ರಣ ಅಸಾಧ್ಯವಾದರೂ ಇಲ್ಲಿ ಮಂಕಿಪಾಕ್ಸ್ ತುರ್ತು ಪಿಡುಗೆಂಬ ಘೋಷಣೆ ಅನಗತ್ಯವೆಂದು ತಜ್ಞರು ಹೇಳುತ್ತಾರೆ. ಬ್ರಿಟಿಷ್ ಅಧಿಕಾರಿಗಳು ಈ ಕಾಯಿಲೆಗೆ ಅಂತಹ ಪ್ರಾಮುಖ್ಯತೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!