ಜುಲೈ 15 ರಿಂದ ಮುಂಗಾರು ಅಧಿವೇಶನ ಶುರು: ಸ್ಪೀಕರ್‌ ಯು.ಟಿ.ಖಾದರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜುಲೈ 15ರಿಂದ 26ವರೆಗೂ 16ನೇ ವಿಧಾನ ಸಭೆಯ ನಾಲ್ಕನೇ ಅಧಿವೇಶನ ನಡೆಯಲಿದೆ. ಒಟ್ಟು ಒಂಬತ್ತು ದಿನಗಳ ಕಾಲ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಸಭೆಯ ಹಿಂಬಾಗಿಲು ಬದಲಿಸುವ ಕೆಲಸ ‌ಮಾಡಿದ್ದೇವೆ. ವಿಧಾನ ಸೌಧದ ಸೌಂದರ್ಯ ಹೆಚ್ಚಿಸಲು ಪ್ಲ್ಯಾನ್ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಜುಲೈ 15ರಂದು ಮುಖ್ಯದ್ವಾರದ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಮೊದಲು ಬಂದವರನ್ನು ಮಾತ್ರ ಗುರುತಿಸುತ್ತೀರಿ ಎಂಬ ಅಪವಾದ ಇತ್ತು. ಈಗ ತಡವಾಗಿ ಹೋದವರನ್ನೂ ಗುರುತಿಸಲು ಸೂಚಿಸಿದ್ದೇನೆ. ದಿನಕ್ಕೆ ವಿಧಾನ ಸಭೆ ಒಳಗೆ ಎಷ್ಟು ಬಾರಿ ಒಳಗೆ ಬಂದರು, ಎಷ್ಟು ಬಾರಿ ಹೊರಗೆ ಹೋದರು ಎಂಬ ಮಾಹಿತಿ ಸಂಗ್ರಹ ಮಾಡುತ್ತೇವೆ. ಜನಪ್ರತಿನಿಧಿಗಳಿಗೆ ಈ ಬಾರಿ ಚೆಸ್ ಗೇಮ್ ಏರ್ಪಾಡು ಮಾಡಿದ್ದೇವೆ. ಇದರಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರು ಭಾಗವಹಿಸಬಹುದು. ಕಾರ್ಯ ದಕ್ಷತೆ ತೋರಿದವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಶೀಘ್ರದಲ್ಲೇ ಕೊಡುತ್ತೇವೆ ಎಂದು ತಿಳಿಸಿದರು.

ನಾಗೇಂದ್ರ ಬಂಧನಕ್ಕೆ ನನ್ನ ಅನುಮತಿ ಬೇಕು
ಇಡಿ ಅಧಿಕಾರಿಗಳು ಶಾಸಕ ನಾಗೇಂದ್ರ ವಶಕ್ಕೆ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಬಂಧನದ ಬಗ್ಗೆ ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ. ಅಧಿವೇಶನ ನಡೆಯದಿರುವಾಗ ಬಂಧಿಸಿದ ಬಳಿಕ ನಮಗೆ ಮಾಹಿತಿ ಕೊಡಬೇಕು. ಇಲ್ಲಿಯವರೆಗೂ ಮಾಹಿತಿ ಕೊಟ್ಟಿಲ್ಲ. ಮುಂದೆ ಮಾಹಿತಿ ಕೊಡಬಹುದು. ಸದ್ಯಕ್ಕೆ ನನಗೆ ಮಾಹಿತಿ ಕೊಟ್ಟಿಲ್ಲ. ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ಅಧಿವೇಶನ ನಡೆಯುವಾಗ ಮಾತ್ರ ಶಾಸಕರನ್ನು ಬಂಧಿಸಬೇಕಿದ್ದರೆ ನನ್ನ ಅನುಮತಿ ಬೇಕು. ಈ ಪ್ರಕರಣದಲ್ಲಿ ನನಗೆ ಇಡಿ ಅಧಿಕಾರಿಗಳು ಬಂಧನದ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!