ಮೊರ್ಬಿ ಸೇತುವೆ ಕುಸಿತ ಭಗವಾನ್ ಕಿ ಇಚ್ಚಾ ಎಂದ ಒರೆವಾ ಕಂಪನಿಯ ಮ್ಯಾನೇಜರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್​ನ ಮೊರ್ಬಿಯಲ್ಲಿ ನಡೆದ ಸೆತುವೆ ಕುಸಿತಕ್ಕೆ ಕಾರಣ ‘ದೇವರ ಇಚ್ಛೆ’ ಎಂದು ಒವೆರಾ ಕಂಪೆನಿಯ ಬಂಧಿತ ಮ್ಯಾನೇಜರ್ ಹೇಳಿದ್ದಾರೆ.

150 ವರ್ಷಗಳಷ್ಟು ಹಳೆಯದಾದ ಸೇತುವೆಯ ನಿರ್ವಹಣೆಯ ಹೊಣೆ ಹೊತ್ತಿರುವ ಒರೆವಾ ಕಂಪನಿಯ(Oreva company) ಮ್ಯಾನೇಜರ್ ದೀಪಕ್ ಪರೇಖ್ ಈ ಹೇಳಿಕೆ ನೀಡಿದ್ದಾರೆ.

‘ಭಗವಾನ್ ಕಿ ಇಚ್ಚಾ (ದೇವರ ಇಚ್ಛೆ) ಯಿಂದಾಗಿ ದುರದೃಷ್ಟಕರ ಘಟನೆ ಸಂಭವಿಸಿದೆ’ ಎಂದು ಅವರು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂಜೆ ಖಾನ್ ಅವರಲ್ಲಿ ಹೇಳಿದ್ದಾರೆ.

ಇಂದು ಪೊಲೀಸ್ ಕಸ್ಟಡಿಗೆ ಕಳುಹಿಸಲಾದ ಆರೋಪಿಗಳ ವಿವರವನ್ನು ಕೇಳಿದಾಗ ವಕೀಲ ಪಾಂಚಾಲ್, ‘ಬಂಧಿತರಲ್ಲಿ ಇಬ್ಬರು ಒರೆವಾ ಕಂಪನಿಯಲ್ಲಿ ಮ್ಯಾನೇಜರ್‌ಗಳು. ಇನ್ನಿಬ್ಬರು ಸೇತುವೆಯ ಫ್ಯಾಬ್ರಿಕೇಶನ್ ಕೆಲಸ ಮಾಡಿದವರು. ಉಳಿದ ಐವರು ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿಗಳಾಗಿದ್ದರು’ ಎಂದರು.

ಸೇತುವೆ ಕಾಮಗಾರಿಯ ಗುತ್ತಿಗೆಯನ್ನು ಒವೆರಾ ಕಂಪನಿ ಗಿಟ್ಟಿಸಿಕೊಂಡಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ ಸೇತುವೆಗೆ ಕಟ್ಟಲಾಗಿದ್ದ ಕೇಬಲ್​ಗಳು ತುಕ್ಕು ಹಿಡಿದಿದ್ದು ನೆಲದ ಹಾಸನ್ನು ಮಾತ್ರವೇ ಬದಲಿಸಲಾಗಿತ್ತು.ಅಗತ್ಯವಿದ್ದಲ್ಲಿ ಗ್ರೀಸಿಂಗ್​ ಕೂಡ ಮಾಡಿರಲಿಲ್ಲ ಎಂದು ಬೆಳಕಿಗೆ ಬಂದಿದೆ.

ಸೇತುವೆ ದುರಸ್ತಿ ಮಾಡಿದ ಗುತ್ತಿಗೆದಾರರು ಸಾರ್ವಜನಿಕ ಮೂಲಸೌಕರ್ಯ ನಿರ್ವಹಣೆಗೆ ಅರ್ಹರಲ್ಲ ಎಂದು ಪ್ರಾಸಿಕ್ಯೂಟರ್ ನ್ಯಾಯಾಧೀಶರಿಗೆ ತಿಳಿಸಿದರು.ಈ ಗುತ್ತಿಗೆದಾರರಿಗೆ 2007 ರಲ್ಲಿ ಮತ್ತು ನಂತರ 2022 ರಲ್ಲಿ ಸೇತುವೆಯ ದುರಸ್ತಿ ಕಾರ್ಯವನ್ನು ನೀಡಲಾಯಿತು. ಕೇಬಲ್‌ಗಳನ್ನು ಬದಲಾಯಿಸದ ಕಾರಣ, ಹೊಸ ಫ್ಲೋರಿಂಗ್‌ನ ತೂಕವನ್ನು ತೆಗೆದುಕೊಳ್ಳಲು ಸಾಧ್ಯವಾಗದೆ ಅವು ಕಿತ್ತುಹೋಗಿವೆ. ನಾಲ್ಕು ಪದರಗಳ ಅಲ್ಯೂಮಿನಿಯಂ ಶೀಟ್‌ಗಳನ್ನು ಫ್ಲೋರಿಂಗ್‌ನಲ್ಲಿ ಬಳಸಿದ್ದರಿಂದ ಸೇತುವೆಯ ತೂಕ ಹೆಚ್ಚಾಗಿದೆ ಎಂದು ಪ್ರಾಸಿಕ್ಯೂಟರ್ ನ್ಯಾಯಾಧೀಶರಿಗೆ ಮಾಹಿತಿ ನೀಡಿದರು .

ಒರೆವಾ ಗ್ರೂಪ್‌ನ ಮತ್ತೊಬ್ಬ ಮ್ಯಾನೇಜರ್ ದೀಪಕ್ ಪರೇಖ್ ಮತ್ತು ಸೇತುವೆಯನ್ನು ದುರಸ್ತಿ ಮಾಡಿದ ಇಬ್ಬರು ಉಪ ಗುತ್ತಿಗೆದಾರರನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಭದ್ರತಾ ಸಿಬ್ಬಂದಿ ಮತ್ತು ಟಿಕೆಟ್ ಬುಕ್ಕಿಂಗ್ ಕ್ಲರ್ಕ್ ಸೇರಿದಂತೆ ಐವರು ಬಂಧಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!