ಭಾರತೀಯ ಸೇನೆಗೆ ಇನ್ನಷ್ಟು ಬಲ: ಬರಲಿದೆ ನದಿ, ರಸ್ತೆಗಳ ಮೇಲೆ ಹಾರಾಡಲು ಜೆಟ್‌ಪ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲೇ ಬಲಿಷ್ಟವಾಗುತ್ತಿರುವ ಭಾರತೀಯ ಸೇನೆಗೆ ಇನ್ನಷ್ಟು ಬಲಗೊಳ್ಳುವತ್ತ ಹೆಜ್ಜೆಯಿರಿಸಿದೆ.
ನದಿ, ರಸ್ತೆಗಳ ಮೇಲೆ ಹಾರಾಡಬಲ್ಲ ಜೆಟ್‌ಪ್ಯಾಕ್ ಸೂಟ್‌ಗಳ ಖರೀದಿಗೆ ಈಗ ಸೇನೆ ಮುಂದಾಗುತ್ತಿದೆ.
ತಂಟೆ ಮಾಡುತ್ತಲೇ ಇರುವ ಚೀನಾ, ಪಾಕ್ ಮೇಲೆ ನೀಗಾ ಇರಿಸಲು, ಸೂಕ್ಷ್ಮ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳನ್ನು ನಿರ್ವಹಿಸಲು ಈ ಜೆಟ್ ಪ್ಯಾಕ್ ಬಹಳಷ್ಟು ಅನುಕೂಲವಾಗಲಿರುವ ಹಿನ್ನೆಲೆಯಲ್ಲಿ ಸೇನೆ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಗ್ರಾವಿಟಿ ಇಂಡಸ್ಟ್ರೀಸ್ ಎಂಬ ಬ್ರಿಟಿಷ್ ಕಂಪೆನಿ ಈ ಜೆಟ್ ಪ್ಯಾಕನ್ನು ಅಭಿವೃದ್ಧಿ ಪಡಿಸಿದೆ. ಈ ಸೂಟ್ ಧರಿಸಿದರೆ ನದಿ ನೀರಿನ ಮೇಲೆ, ರಸ್ತೆಗಳ ಮೇಲೆ, ಗದ್ದೆ, ಹೊಲಗಳ ಮೇಲೆ ಹಾರಾಡುವುದು ಸುಲಭವಾಗುತ್ತದೆ. ಸದ್ಯ 48 ಜೆಟ್‌ಪ್ಯಾಕ್ ಸೂಟ್‌ಗಳ ಖರೀದಿ ಮಾಡಲು ಸೇನೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!