ನಾಳೆ ದಾವಣಗೆರೆಗೆ ಪ್ರಧಾನಿ ಮೋದಿ, ಬಿಜೆಪಿ ಮಹಾಸಂಗಮಕ್ಕೆ 10 ಲಕ್ಷಕ್ಕೂ ಹೆಚ್ಚು ಜನರ ನಿರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನಷಭಾ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಾಳೆ ದಾವಣಗೆರೆಗೆ ಆಗಮಿಸುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.

ಮಿಷನ್ 15 ಗುರಿಯೊಂದಿಗೆ ರಾಜ್ಯದ ನಾಲ್ಕು ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿತ್ತು. ಮಲೆ ಮಾದೇಶ್ವರ ಬೆಟ್ಟ, ನಂದಗಡ, ಬಸವ ಕಲ್ಯಾಣ ಹಾಗೂ ಅವತಿ ದೇವನಹಳ್ಳಿಯಿಂದ ರಥಯಾತ್ರೆ ಆರಂಭವಾಗಿತ್ತು. ಒಟ್ಟಾರೆ 5,600 ಕಿ.ಮೀ ಕ್ರಮಿಸಿದ ರಥಯಾತ್ರೆಗಳು ದಾವಣಗೆರೆಯಲ್ಲಿ ಮಹಾಸಂಗಮವಾಗಲಿವೆ.

ಜಿಎಂಐಟಿ ಕಾಲೇಜಿನ ಸಮೀಪದ ಮೈದಾನದಲ್ಲಿ ಮಧ್ಯಾಹ್ನ ಕಾರ್ಯಕ್ರಮ ನಡೆಯಲಿದ್ದು, ಜನರಿಗಾಗಿ ಊಟ, ಉಪಹಾರ, ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿ ದೆಹಲಿಯಿಂದ ಚಿಕ್ಕಮಗಳೂರಿಗೆ ಆಗಮಿಸಿ ಮಧುಸೂದನ್ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ ಬೆಂಗಳೂರಿನ ವೈಟ್‌ಫೀಲ್ಡ್ ಮೆಟ್ರೋ ಲೈನ್ ಉದ್ಘಾಟಿಸಲಿದ್ದಾರೆ, ತದನಂತರ ದಾವಣಗೆರೆಗೆ ಆಗಮಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!