ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಶುಕ್ರವಾರ ಕ್ಷೀಣವಾಗಿ ತೆರೆದಿವೆ. ಎನ್ಎಸ್ಇ ನಿಫ್ಟಿ 50ಯು 17.20 ಅಂಕಗಳನ್ನು ಗಳಿಸಿ 17,094.10 ಕ್ಕೆ ಏರಿದೆ ಮತ್ತು ಬಿಎಸ್ಇ ಸೆನ್ಸೆಕ್ಸ್ 129.66 ಅಂಕಗಳು ಅಥವಾ 0.22 ಶೇಕಡಾ ಏರಿಕೆಯಾಗಿ 58,054.94 ಕ್ಕೆ ತಲುಪಿದೆ. ಬ್ಯಾಂಕ್ ನಿಫ್ಟಿ 15.00 ಅಂಕಗಳು ಅಥವಾ 0.04ಶೇ. ಕುಸಿದು 39,601.90 ಕ್ಕೆ ತಲುಪಿದೆ.
ನಿಫ್ಟಿ 50 ಯಲ್ಲಿ ಹೆಚ್ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಿಸಿಎಸ್ ಮತ್ತು ವಿಪ್ರೋ ಟಾಪ್ ಗೇನರ್ ಆಗಿದ್ದರೆ, ಎಚ್ಡಿಎಫ್ಸಿ ಲೈಫ್, ಎಸ್ಬಿಐ ಲೈಫ್, ಬಜಾಜ್ ಫೈನಾನ್ಸ್, ಟೈಟಾನ್ ಮತ್ತು ಬಜಾಜ್ ಫಿನ್ಸರ್ವ್ ನಷ್ಟ ಅನುಭವಿಸಿವೆ.