ದೇಶದಲ್ಲಿ 100 ವರ್ಷ ದಾಟಿದ 2.5 ಲಕ್ಷ ಮತದಾರರಿದ್ದಾರೆ: ಚುನಾವಣಾ ಆಯೋಗ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ 100 ವರ್ಷ ಮೀರಿದ 2.5 ಲಕ್ಷ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಬಹಿರಂಗಪಡಿಸಿದೆ. ಭಾರತೀಯ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಮಾಧ್ಯಮಗಳಿಗೆ ಈ ವಿವರಗಳನ್ನು ನೀಡಿದ್ದಾರೆ. ಅವರು ಬಹಿರಂಗಪಡಿಸಿದ ವಿವರಗಳ ಪ್ರಕಾರ, ದೇಶದಲ್ಲಿ 100 ವರ್ಷ ಮೀರಿದ 2,55,598 ಲಕ್ಷ ಮತದಾರರಿದ್ದಾರೆ.

80 ವರ್ಷ ಮೇಲ್ಪಟ್ಟ ಮತದಾರರು 1,83,53,347, 18-19 ವರ್ಷ ವಯಸ್ಸಿನ ಮತದಾರರು 1,52,34,341 ಮತ್ತು 20-29 ವರ್ಷ ವಯಸ್ಸಿನ ಮತದಾರರು 20,06,65,436 ಎಂದು ತಿಳಿಸಿದೆ. ಚುನಾವಣಾ ಆಯೋಗವು ಆಯಾ ಕಾಲಕ್ಕೆ ದೇಶದ ಮತದಾರರ ಅಂಕಿಅಂಶಗಳನ್ನು ಬಹಿರಂಗಪಡಿಸುತ್ತದೆ.

ಚುನಾವಣಾ ಆಯೋಗದ ವತಿಯಿಂದ ದೇಶದಲ್ಲಿ ಮತದಾನದ ಅಗತ್ಯತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!