ಮತ್ತೆ 25ಕ್ಕೂ ಹೆಚ್ಚು ವಿಮಾನಗಳಿಗೆ ಬಂತು ಹುಸಿ ಬಾಂಬ್‌ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆಗಳು ಮುಂದುವರೆದಿದ್ದು, ಶುಕ್ರವಾರವೂ ಬರೋಬ್ಬರಿ 25ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆಗಳು ಬಂದಿವೆ .

ಕೋಝಿಕ್ಕೋಡ್‌ – ದಮಾಮ್‌ 6E 87 ವಿಮಾನ ಸೇರಿದಂತೆ ಏಳು ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎಂದು ಶುಕ್ರವಾರ ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

ಇಂಡಿಗೋ, ವಿಸ್ತಾರಾ ಮತ್ತು ಸ್ಪೈಸ್‌ಜೆಟ್‌ನ ತಲಾ ಏಳು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದರೆ, ಏರ್ ಇಂಡಿಯಾದ ಆರು ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಇಂಡಿಗೋದ ಇತರ ಆರು ವಿಮಾನಗಳು – 6E 2099(ಉದಯಪುರದಿಂದ ದೆಹಲಿ), 6E 11 (ದೆಹಲಿಯಿಂದ ಇಸ್ತಾಂಬುಲ್), 6E 58 (ಜೆಡ್ಡಾದಿಂದ ಮುಂಬೈ), 6E 17 (ಮುಂಬೈನಿಂದ ಇಸ್ತಾಂಬುಲ್), 6E 108 (ಹೈದರಾಬಾದ್‌ನಿಂದ ಚಂಡೀಗಢ) ಮತ್ತು 6E 133(ಪುಣೆಯಿಂದ ಜೋಧಪುರ) ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ.

ಉದಯಪುರದಿಂದ ದೆಹಲಿಗೆ ಕಾರ್ಯಾಚರಣೆ ನಡೆಸುತ್ತಿರುವ ಫ್ಲೈಟ್ 6E 2099 ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದೆ. ಭದ್ರತಾ ಪಡೆಯ ಮಾರ್ಗಸೂಚಿಗಳನ್ನು ಅನುಸರಿಸಿ, ವಿಮಾನವನ್ನು ಟೇಕ್-ಆಫ್ ಮಾಡುವ ಮೊದಲು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಯಿತು ಮತ್ತು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಏರ್‌ಲೈನ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 12 ದಿನಗಳಲ್ಲಿ, ಭಾರತೀಯ ವಿಮಾನಯಾನ ಸಂಸ್ಥೆಗಳ ಸುಮಾರು 275 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!