ಉಕ್ರೇನ್ ವಾಪಾಸ್ ಪಡೆದ ನಗರದ ಸಾಮೂಹಿಕ ಸಮಾಧಿಯಲ್ಲಿ 440ಕ್ಕೂ ಹೆಚ್ಚು ಶವ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುದ್ಧಭೂಮಿ ಉಕ್ರೇನ್‌ನಲ್ಲಿ 440ಕ್ಕೂ ಹೆಚ್ಚು ಶವಗಳಿರುವ ಸಾಮೂಹಿಕ ಸಮಾಧಿಯೊಂದನ್ನು ಉಕ್ರೇನ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ರಷ್ಯಾ ಗಡಿಯಲ್ಲಿ ಇರುವ ಪೂರ್ವ ಉಕ್ರೇನ್‌ನ ಇಜಿಯಂ ನಗರದಲ್ಲಿ ಶವಗಳು ಪತ್ತೆಯಾಗಿವೆ. ಸುಮಾರು 200ಕ್ಕೂ ಹೆಚ್ಚು ದಿನ ಯುದ್ಧದ ಭೀಕರತೆಯನ್ನು ಉಕ್ರೇನ್ ಎದುರಿಸಿತ್ತು. ಇದಾದ ನಂತರ ಇತ್ತೀಚೆಗಷ್ಟೇ ಈ ನಗರವನ್ನು ರಷ್ಯಾದ ಪಡೆಗಳಿಂದ ಉಕ್ರೇನ್ ಮರುವಶಪಡಿಸಿಕೊಂಡಿತ್ತು.

ಸಮಾಧಿಯಲ್ಲಿ ಹೂತುಹಾಕಿರುವ ಶವಗಳ ಬಗ್ಗೆ ತನಿಖೆ ನಡೆಯಲಿದೆ, ಪ್ರತಿ ಶವದ ವಿಧಿವಿಜ್ಞಾನ ತನಿಖೆ ನಡೆಸಲಾಗುವುದು, ಇಷ್ಟೊಂದು ಶವಗಳನ್ನು ಒಟ್ಟಿಗೇ ಒಂದು ಬಾರಿ ಕಂಡಿದ್ದೇವೆ. ಬೆಂಕಿಯಿಂದ ಹಲವರು ಮೃತಪಟ್ಟಿದ್ದರೆ, ವಾಯುದಾಳಿಯಿಂದ ಉಳಿದವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಇಷ್ಟು ದೊಡ್ಡ ಮಟ್ಟದ ಮಾರಣಹೋಮಕ್ಕೆ ರಷ್ಯಾ ನೇರ ಹೊಣೆ, ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿ. ಹೆಜ್ಜೆಯಿಟ್ಟಲ್ಲೆಲ್ಲಾ ಸಾವಿನ ಛಾಯೆ ಕಾಣುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!