ಹೊಸದಿಗಂತ ವರದಿ, ರಾಯಚೂರು :
ಹಲ್ಲಿ ಬಿದ್ದ ಆಹಾರವನ್ನು ಸೇವಿಸಿ 50 ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ಅಸ್ವಸ್ಥಗೊಂಡಿರುವ ಘಟನೆ ರಾಯಚೂರಿನ ಚಂದ್ರಬoಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ ಹಲ್ಲಿ ಬಿದ್ದ ಫಲಾವುವನ್ನು 250 ಹೆಚ್ಚು ಮಕ್ಕಳು ಸೇವನೆ ಮಾಡಿದ್ದರು. ಇದರಿಂದ 50 ಕ್ಕೂ ಹೆಚ್ಚು ಮಕ್ಕಳು ವಾಂತಿ, ಭೇದಿಯನ್ನು ಮಾಡಿಕೊಳ್ಳಲಾರಂಬಿಸಿದ್ದಾರೆ.
ಕಾರಣ ತಿಳಿಯಲು ಆಹಾರವನ್ನು ಪರೀಕ್ಷಿಸಿದಾಗ ಫಲಾವುನಲ್ಲಿ ಹಲ್ಲಿಯ ದೇಹದ ಚಿಕ್ಕ ಚಿಕ್ಕ ಮಾಂಸದ ಚೂರುಗಳಿರುವುದು ಕಂಡುಬoದಿವೆ.
ಇದರಿಂದ ಎಚ್ಚೆತ್ತುಕೊಂಡ ವಸತಿ ಶಾಲೆಯ ಸಿಬ್ಬಂದಿಗಳು ಅಸ್ವಸ್ಥಗೊಂಡ ಮಕ್ಕಳನ್ನು ತಕ್ಷಣ ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಯ ನಂತರ ಎಲ್ಲ ಮಕ್ಕಳ ಆರೋಗ್ಯ ಸುಧಾರಿದೆ. ಬಳಿಕ ಮಕ್ಕಳನ್ನು ಶಾಲೆಗೆ ಕಳಿಸಲಾಗಿದೆ.
ಘಟನೆ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ನಿತೀಶ್ಕೆ ಹಾಗೂ ಜಿಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆಅವರು ರಿಮ್ಸ್ ಗೆ ಭೇಟಿ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.
ಡಿಹೆಚ್‌ಒ ಡಾ ಸುರೇಂದ್ರ ಬಾಬು ಮಕ್ಕಳ ಆರೋಗ್ಯ ಸಹ ಬೇಟಿ ನೀಡಿದ್ದರು.
ಎಲ್ಲ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಮಾತನಾಡಿ, ನಿಮ್ಮ ಆರೋಗ್ಯ ಸುಧಾರಿಸಿದೆ ನೀವು ಅಂಜಬೇಕಾಗಿಲ್ಲ. ನೀವು ಈಗಲೇ ಶಾಲೆಗೆ ಹೋಗಬಹುದು ಎಂದು ತಿಳಿಸುವ ಮೂಲಕ ಅವರಿಗೆ ಧೈರ್ಯವನ್ನು ತುಂಬಿದ್ದಾರೆ.
ಆಹಾರದಲ್ಲಿ ವ್ಯತ್ಯಾಸ ಆಗಿರುವ ಕುರಿತು ವಾರ್ಡ್ನ್ ಮತ್ತು ಆಹಾರ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.