ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್‌ನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಒಳಗಾಗಿದ್ದು, ಭಾರತದಿಂದ ಅವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ನಾರ್ತ್ ವ್ಹೇಲ್ಸ್‌ನ ಕೇರ್ ಹೋಮ್‌ಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದಾರೆ. ಭಾರತೀಯ ಹೈ ಕಮಿಷನ್ ವಿದ್ಯಾರ್ಥಿಗಳ ಸಹಾಯಕ್ಕೆ ನೆರವಿನ ಹಸ್ತ ಚಾಚಿದ್ದು, ಈ ರೀತಿಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ಕೇಳಿ ಎಂದು ಕರೆ ನೀಡಿದೆ.
ಜಿಎಲ್‌ಎಎ ಅನ್ವಯ 50ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದು, ಕಳೆದ 14 ತಿಂಗಳಿನಿಂದ ಕಾರ್ಮಿಕ ನಿಂದನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಸಮಸ್ಯೆಗೆ ಒಳಗಾದ ವಿದ್ಯಾರ್ಥಿಗಳು [email protected] ಮೂಲಕ ಭಾರತೀಯ ಹೈ ಕಮಿಷನ್‌ನ್ನು ಸಂಪರ್ಕಿಸಬಹುದು ಎಂದು ಹೇಳಲಾಗಿದೆ.