ಏಕಕಾಲದಲ್ಲಿ ಹಾರಾಡಿದ 77 ಸಾವಿರಕ್ಕೂ ಹೆಚ್ಚು ತ್ರಿವರ್ಣಧ್ವಜ: ಪಾಕ್ ದಾಖಲೆಯನ್ನುಅಳಿಸಿದ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಹಾರದ ಪಾಟ್ನಾದಲ್ಲಿ ಬಾಬು ವೀರ ಕುನ್ವರ್ ಸಿಂಗ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ 77 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜಗಳನ್ನು ಕೈಯಲ್ಲಿ ಹಿಡಿದು ಹಾರಿಸುವ ಮೂಲಕ ಪಾಕಿಸ್ತಾನದ ದಾಖಲೆಯನ್ನು ಭಾರತ ಅಳಿಸಿ ಹಾಕಿದೆ.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿ ವೀರ್​ ಕುನ್ವರ್ ಸಿಂಗ್​ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಭಾಗಿಯಾದರು. ಈ ವೇಳೆ ರಾಷ್ಟ್ರಧ್ವಜಗಳನ್ನು ಏಕಕಾಲದಲ್ಲಿ ಹಾರಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
2004ರಲ್ಲಿ ಪಾಕಿಸ್ತಾನ ಏಕಕಾಲಕ್ಕೆ 57,632 ಧ್ವಜಗಳನ್ನು ಹಾರಿಸಿ ದಾಖಲೆ ಬರೆದಿತ್ತು. ಇದೀಗ ಆ ರೆಕಾರ್ಡ್​ ಬ್ರೇಕ್​ ಆಗಿದೆ. ವಿಜಯೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.
ಅಮಿತ್ ಶಾ ಮಾತನಾಡಿ, ವೀರ್ ಕುನ್ವರ್ ಸಿಂಗ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ವೀರ ಯೋಧರ ಸಾಹಸದ ಬಗ್ಗೆ ಭಾರತದ ಯುವಕರು ಕಲಿಯಬೇಕಾಗಿರುವುದು ತುಂಬಾ ಇದೆ ಎಂದರು.
2047 ರ ವೇಳೆಗೆ ದೇಶವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ವೇಳೆಗೆ ಭಾರತವನ್ನು ವಿಶ್ವದಲ್ಲಿ ಪ್ರಥಮ ಸ್ಥಾನವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಹೇಳಿದ್ದಾರೆ.
ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಮೋದಿ ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿದರು, ಇದರಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮತ್ತು ಬಡವರಿಗೆ ಉಚಿತ ಮಾಸಿಕ ಪಡಿತರ ಸೇರಿದೆ.
1857 ರ ದಂಗೆಯನ್ನು ಎತ್ತಿ ತೋರಿಸುವಲ್ಲಿ RSS ಸಿದ್ಧಾಂತವಾದಿ ವಿ ಡಿ ಸಾವರ್ಕರ್ ಅವರ ಪಾತ್ರದ ಬಗ್ಗೆ ಅವರು ಮಾತನಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!