ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ಬ್ರಿಟನ್ ರಾಣಿ ಎಲಿಜಬೆತ್ ಅಂತ್ಯಕ್ರಿಯೆ ನಡೆದಿದ್ದು, ಅಂತ್ಯಕ್ರಿಯೆಯ ಲೈವ್ ಟೆಲಿಕಾಸ್ಟ್ನ್ನು 4.1 ಬಿಲಿಯನ್ ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ.
ಅಂತ್ಯಕ್ರಿಯೆಯನ್ನು ನೇರಪ್ರಸಾರ ಮಾಡಲಾಗಿತ್ತು, ಅಂದಾಜು 410 ಕೋಟಿ ಜನರು, ಅಂದರೆ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಲೈವ್ ಟೆಲಿಕಾಸ್ಟ್ ವೀಕ್ಷಿಸಿದ್ದಾರೆ ಎನ್ನಲಾಗಿದೆ.
ವಿಭಿನ್ನ ವಿಧಿವಿಧಾನಗಳನ್ನು ಜನ ವೀಕ್ಷಿಸಿದ್ದು, ಈ ಹಿಂದೆ ರಾಜಕುಮಾರಿ ಡಯಾನಾ ಅಂತ್ಯಕ್ರಿಯೆಯನ್ನು 2.5 ಬಿಲಿಯನ್ ಮಂದಿ ವೀಕ್ಷಿಸಿದ್ದರು ಎನ್ನಲಾಗಿತ್ತು.