Friday, September 29, 2023

Latest Posts

SHOCKING VIDEO| ಎದೆ ಝಲ್ಲೆನಿಸುವಂತಿದೆ ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪ, ನೀವೂ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪ ನೋಡುಗರ ಎದೆ ಬಡಿತ ನಿಲ್ಲುವಂತೆ ಮಾಡುತ್ತದೆ. ಶಾಂತಿಯುತವಾಗಿ ನಿದ್ದೆಮಾಡುತ್ತಿದ್ದ ಪ್ರದೇಶದಲ್ಲಿ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಭೂಕಂಪ ಸಂಭವಿಸಿದ್ದು, ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಗಾಯಗಳಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವದ ಎಲ್ಲಾ ದೇಶಗಳು ಕೂಡ ಮೊರಾಕ್ಕೊ ಭೂಕಂಪದ ಬಗ್ಗೆ ಆಘಾತ ವ್ಯಕ್ತಪಡಿಸಿವೆ. ನರೇಂದ್ರ ಮೋದಿಯವರು ಮೊರೊಕ್ಕೊಗೆ G-20 ವೇದಿಕೆಯಾಗಿ ಸಾಧ್ಯವಾದಷ್ಟು ಸಹಾಯ ಮಾಡಲು ಭರವಸೆ ನೀಡಿದರು.

ತಮ್ಮ ಕಣ್ಣೆದುರೇ ಎತ್ತರದ ಕಟ್ಟಡಗಳು ಕುಸಿದು ಬೀಳುತ್ತಿರುವುದನ್ನು ಹಲವರು ತಮ್ಮ ಫೋನ್‌ಗಳಲ್ಲಿ ವಿಡಿಯೋ ಮಾಡಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಅವುಗಳನ್ನು ನೋಡಿದರೆ ಭೂಕಂಪವು ಎಷ್ಟು ಕೆಟ್ಟದಾಗಿ ಹಾನಿ ಮಾಡಿದೆ ಎಂದು ಊಹಿಸಲೂ ಅಸಾಧ್ಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!