ಮಾಸ್ಕೋ ಮೇಲೆ ಸರಣಿ ಡ್ರೋನ್ ದಾಳಿ: ಹಾನಿಗೊಳಗಾದ ಕಟ್ಟಡಗಳು, ವಿಮಾನ ಸಂಚಾರ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಕಕಾಲಕ್ಕೆ ಸರಣಿ ಡ್ರೋನ್‌ ದಾಳಿಯಾಗಿರುವ ಘಟನೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ. ಎಚ್ಚೆತ್ತ ರಷ್ಯಾದ ಸೇನೆ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಿತು. ಡ್ರೋನ್ ದಾಳಿಯಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು, ಮಾಸ್ಕೋದಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ದಾಳಿಯಲ್ಲಿ ಎರಡು ಕಟ್ಟಡಗಳಿಗೆ ಹಾನಿಯಾಗಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ರಾತ್ರಿ ಉಕ್ರೇನಿಯನ್ ಡ್ರೋನ್‌ಗಳು ಮಾಸ್ಕೋ ಮೇಲೆ ದಾಳಿ ನಡೆಸಿದಾಗ ಎರಡು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಅಲ್ಲಿನ ಸ್ಪಷ್ಟಪಡಿಸಿದರು.

ರಷ್ಯಾದ ರಾಜಧಾನಿಯಾದ ಮಾಸ್ಕೋ, ಉಕ್ರೇನಿಯನ್ ಗಡಿಯಿಂದ 500 ಕಿಲೋಮೀಟರ್ (310 ಮೈಲಿ) ದೂರದಲ್ಲಿದೆ. ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ರಾಜಧಾನಿಯ ಡಾಟೊವೊ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಆದಾಗ್ಯೂ, ಶನಿವಾರ ತಡರಾತ್ರಿ ಡ್ರೋನ್ ದಾಳಿಯಲ್ಲಿ ಐದು ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ರಷ್ಯಾ ಹೇಳಿದೆ.

ಫೆಬ್ರವರಿ 2022 ರಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ವಾತಾವರಣವಿದೆ. ರಷ್ಯಾ ವಶಪಡಿಸಿಕೊಂಡ ಪ್ರದೇಶವನ್ನು ಮರಳಿ ಪಡೆಯಲು ಉಕ್ರೇನ್ ಮಾಸ್ಕೋ ಮೇಲೆ ದಾಳಿ ಮಾಡಿದೆ ಎಂದು ತೋರುತ್ತದೆ. ಶುಕ್ರವಾರ, ಉಕ್ರೇನ್‌ನ ಗಡಿಯಲ್ಲಿರುವ ದಕ್ಷಿಣ ರೋಸ್ಟೋವ್ ಪ್ರದೇಶದ ಮೇಲೆ ಎರಡು ಉಕ್ರೇನಿಯನ್ ಕ್ಷಿಪಣಿಗಳನ್ನು ತಡೆದಿರುವುದಾಗಿ ರಷ್ಯಾ ಹೇಳಿದೆ. ಶನಿವಾರ ರಾತ್ರಿ ಮಾಸ್ಕೋದಲ್ಲಿ ಡ್ರೋನ್ ದಾಳಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!