ಮಾಸ್ಕೋ ಟೆರರ್ ಅಟ್ಯಾಕ್: ನಾಲ್ವರು ಶಸ್ತ್ರಧಾರಿಗಳ ಸಹಿತ 11 ಮಂದಿ ಶಂಕಿತರು ವಶಕ್ಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಸ್ಕೋ ನರಮೇಧ ಘಟನೆಗೆ ಸಂಬಂಧಿಸಿ ಇದುವರೆಗೆ ನಾಲ್ವರು ಶಸ್ತ್ರಧಾರಿಗಳ ಸಹಿತ 11 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಷ್ಯಾ ಆಡಳಿತ ಹೇಳಿದೆ.

ದಾಳಿಕೋರರು ಉಕ್ರೇನ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಭಯೋತ್ಪಾದಕ ದಾಳಿ ನಡೆಸಿದ ನಂತರ, ಅಪರಾಧಿಗಳು ರಷ್ಯಾ-ಉಕ್ರೇನಿಯನ್ ಗಡಿ ದಾಟಲು ಉದ್ದೇಶಿಸಿದ್ದರು. ಅಲ್ಲದೆ ಇವರು ಉಕ್ರೇನಿಯನ್ ಭಾಗದಲ್ಲಿ ಸೂಕ್ತ ಸಂಪರ್ಕ ವ್ಯವಸ್ಥೆಗಳನ್ನು ಹೊಂದಿದ್ದರು ಎಂದು ರಷ್ಯಾದ ಭದ್ರತಾ ಸಂಸ್ಥೆ ಹೇಳಿದೆ.

ಆದರೆ ಇದೇ ವೇಳೆ ರಷ್ಯಾ ಹೇಳಿಕೆಯನ್ನು ಉಕ್ರೇನ್ ಅಲ್ಲಗಳೆದಿದೆಯಲ್ಲದೆ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇತ್ತ ನರಮೇಧದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿದ್ದು, ನಮ್ಮ ಸಹಚರರು ಈ ದಾಳಿ ಮಾಡಿದ್ದಾರೆ, ದಾಳಿಯ ನಂತರ ಸುರಕ್ಷಿತವಾಗಿ ತಮ್ಮ ನೆಲೆಗಳಿಗೆ ಹಿಂದಿರುಗಿದ್ದಾರೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!