ಮೋದಿ ಬಂದ ಮೇಲೆ ಅತಿ ಹೆಚ್ಚು ಮೆಡಿಕಲ್ ಕಾಲೇಜು ಪ್ರಾರಂಭ: ರವಿಕುಮಾರ್

ಹೊಸದಿಗಂತ ವರದಿ, ಕಲಬುರಗಿ:

ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಆಡಳಿತ ಬಂದ ಮೇಲೆ ದೇಶದಲ್ಲಿ 57 ಮೆಡಿಕಲ್ ಕಾಲೇಜುಗಳು ಪ್ರಾರಂಭವಾಗಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.

ಅವರು ಭಾನುವಾರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ವಿಶ್ಲೇಷಣೆ ಮಾಡಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಆಧಿಕಾರದ ಅವಧಿ ಯಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ ದೇಶದ ಜನ ಈಗ ನೆಮ್ಮದಿ ಕಾಣುತ್ತಿದ್ದಾರೆ. ನರೇಂದ್ರ ಮೋದಿಯವರ ಆಡಳಿತ ಬಂದ ಮೇಲೆ ಬಡವರಿಗೆ, ಹಿಂದೂಳಿದವರಿಗೆ.ರೈತರಿಗೆ ಸಾಕಷ್ಟು ಅನುಕೂಲ ಆಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

ನದಿ ಜೋಡಣೆಗಳ ಕಾಯ೯, ರಸ್ತೆ ಅಗಲಿಕರಣ, ನಲ್ಲಿಯಿಂದ ಪ್ರತಿಯೊಬ್ಬರಿಗೆ ನೀರು, ಬಿಜ್ ಸೆ ಬಜಾರ್ ತಕ ಎಂಬ ಹಲವು ಯೋಜನೆಗಳು ಈ ಬಜೆಟ್ ನಲ್ಲಿ ಸರಕಾರ ಮಾಡಿದೆ ಎಂದರು. ಶಿಕ್ಷಣದ ಬೆಳವಣಿಗೆ, ರಸ್ತೆ ಗಳ ನಿಮಾ೯ಣ, ರೈತರ ಬಗ್ಗೆ ಕಾಳಜಿ ಸೇರಿದಂತೆ ಭವಿಷ್ಯದ ದೂರದೃಷ್ಟಿಯ ಬಜೆಟ್ ಮಂಡನೆಯಾಗಿದೆ ಎಂದರು.

ಭಾರತ ಸೆಲ್ಫ ಡೆವಲಾಫಮೆಂಪ ಮಾಡಿಕೊಂಡು ಮುನ್ನುಗ್ಗುತ್ತಿದೆ. ದೇಶದ ಅಭಿವೃದ್ದಿಯಲ್ಲಿ ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದು, ಹೀಗಾಗಿ ಸರಕಾರಿ ಶಾಲೆಗಳಲ್ಲಿ ಕ್ಟಾಲಿಟಿ ತರುವ ನಿಟ್ಟಿನಲ್ಲಿ ಎನ್.ಇ.ಪಿ.ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಬಡವರಿಗಾಗಿ ಕೇಂದ್ರ ಸರ್ಕಾರ 80 ಲಕ್ಷ ಜನ ಮಹಿಳೆಯ ಹೆಸರಿನಲ್ಲಿ ಮನೆಯನ್ನು ಕೊಡುತ್ತಿದೆ ಎಂದರು.

5 ಕೋಟಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಮನೆಗಳನ್ನು ಕೊಡುತ್ತಿದ್ದು, ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸಿ ಹಲವಾರು ಯೋಜನೆಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ ಎಂದರು. 12 ಕೋಟಿ ಶೌಚಾಲಯ ನಿರ್ಮಾಣ,9 ಕೋಟಿ ಸಿಲಿಂಡರ್, 11 ಕೋಟಿ ರೈತರ ಖಾತೆಗೆ 22 ಕೋಟಿ ಹಣ ಜಮಾ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್, ಈಶ್ವರ ಸಿಂಗ್ ಠಾಕೂರ್, ಶಿವರಾಜ ಪಾಟೀಲ್ ರದ್ದೇವಾಡಗಿ, ಮಹಾದೇವ ಬೆಳಮಗಿ, ಉಮೇಶ್ ಪಾಟೀಲ್, ಲಿಂಗರಾಜ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!