ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ ಪ್ರಸಾದ್‌ ಪೂಜಾರಿ ಚೀನಾದಿಂದ ಭಾರತಕ್ಕೆ ಗಡಿಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

 

ಶಿವಸೇನಾ ಕಾರ್ಯಕರ್ತ ಚಂದ್ರಕಾಂತ ಜಾಧವ್ ಹತ್ಯೆ ಹಾಗೂ ಹಲವು ಸುಲಿಗೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪ್ರಸಾದ್ ಪೂಜಾರಿಯನ್ನು ಚೀನಾ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ. ಶನಿವಾರ ಮುಂಬೈಗೆ ಬಂದಿಳಿದ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸದಾ ಭಯೋತ್ಪಾದಕರು ಮತ್ತು ದರೋಡೆಕೋರರ ವಿರುದ್ಧ ಭಾರತ ವಿರೋಧಿ ನಿಲುವು ಹೊಂದಿರುವ ಚೀನಾ ಸರ್ಕಾರ ಭಾರತದ ಕೋರಿಕೆಯ ಮೇರೆಗೆ ಪ್ರಸಾದ್ ಅವರನ್ನು ಗಡಿಪಾರು ಮಾಡಿದ್ದು ಅಪರೂಪದ ಘಟನೆ.

ಚೀನಾದಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕಳೆದ ವರ್ಷದಿಂದ ವೇಗ ಪಡೆದುಕೊಂಡಿದೆ. ಮುಂಬೈ ಮತ್ತು ಥಾಣೆ ಜಿಲ್ಲೆಯಲ್ಲಿ ಪ್ರಸಾದ್ ಪೂಜಾರಿ ವಿರುದ್ಧ 15 ರಿಂದ 20 ಪ್ರಕರಣಗಳು ದಾಖಲಾಗಿವೆ.

ಪ್ರಸಾದ್ ಪೂಜಾರಿಯನ್ನು ಚೀನಾದ ಅಧಿಕಾರಿಗಳು ಮಾರ್ಚ್ 2023 ರಲ್ಲಿ ಹಾಂಗ್ ಕಾಂಗ್‌ನಲ್ಲಿ ಬಂಧಿಸಿದ್ದರು. ಮುಂಬೈನಲ್ಲಿ ಪ್ರಸಾದ್ ಪೂಜಾರಿ ವಿರುದ್ಧ ಈಗಾಗಲೇ ಸುಲಿಗೆ, ಕೊಲೆ ಮತ್ತು ಕೊಲೆ ಯತ್ನದಂತಹ ವಿವಿಧ ಪ್ರಕರಣಗಳು ದಾಖಲಾಗಿವೆ.

ಪ್ರಸಾದ್ ಪೂಜಾರಿ ಮೋಸ್ಟ್ ವಾಂಟೆಡ್ ಆರೋಪಿ. ನಕಲಿ ಪಾಸ್‌ಪೋರ್ಟ್ ಹೊಂದಿರುವ ಆರೋಪದ ಮೇಲೆ 2023ರ ಮಾರ್ಚ್‌ನಲ್ಲಿ ಹಾಂಕಾಂಗ್‌ನಲ್ಲಿ ಬಂಧಿತನಾಗಿದ್ದ ಪೂಜಾರಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!