ಹೊಸದಿಗಂತ ವರದಿ,ಕೆ.ಆರ್.ಪೇಟೆ :
ತಾಲೂಕಿನ ಶೀಳನೆರೆ ಹೋಬಳಿಯ ನೀತಿಮಂಗಲ ಗ್ರಾಮ ದಿಂದ ಗ್ರಾಮದ ಗುತ್ತಿಗೆದಾರ ನಂದೀಶ್ ಅವರ ಪತ್ನಿ ನಂದಿನಿ(32) ಹಾಗೂ ಅವರ ಪುತ್ರಿ ಭಾಂದವ್ಯ(09) ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ತಮ್ಮ ಮಗಳು ಮತ್ತು ಮೊಮ್ಮಗಳು ಕಾಣೆಯಾಗಿರುವ ಬಗ್ಗೆ ನಂದಿನಿ ಅವರ ತಂದೆ ಲಕ್ಕೇಗೌಡ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಿದ್ದು ಕಾಣೆಯಾಗಿರುವ ತಾಯಿ ಮಗಳ ಪತ್ತೆಗೆ ಪೋಲಿಸ್ ಇನ್ಸ್ ಪೆಕ್ಟರ್ ಸುಮಾರಾಣಿ ಕಾರ್ಯಾಚರಣೆ ನಡೆಸಿದ್ದಾರೆ.
ಕನ್ನಡ ಮತ್ತು ತೆಲುಗು ಭಾಷೆಯನ್ನು ಮಾತನಾಡುವ ನಂದಿನಿ ಪತಿಯೊಂದಿಗೆ ಜಗಳವಾಡಿಕೊಂಡಿದ್ದರು ಎಂದು ತಿಳಿಸಿದ ಲಕ್ಕೇಗೌಡ ಮಗಳು ಕಾಣೆಯಾಗಲು ನಿರ್ಧಿಷ್ಠವಾದ ಕಾರಣಗಳು ತಿಳಿದಿಲ್ಲ. ತನ್ನ ಮಗಳು ಹಾಗೂ ಮೊಮ್ಮಗಳನ್ನು ಪತ್ತೆ ಮಾಡಿ ಕೊಡಬೇಕು ಎಂದು ಪ್ರಾರ್ಥಿಸಿರುವ ಲಕ್ಕೇಗೌಡ ಮಗಳು ಮನೆಯಿಂದ ಮೊಮ್ಮಗಳೊಂದಿಗೆ ಹೊರಟಾಗ ಚೂಡಿಧಾರ್ ಧರಿಸಿದ್ದು, ಎಣ್ಣೆಗೆಂಪು ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟನ್ನು ಹೊಂದಿದ್ದಾರೆ.
ನಿಗೂಢವಾಗಿ ನಾಪತ್ತೆ ಯಾಗಿರುವ ತಾಯಿಮಗಳ ಬಗ್ಗೆ ತಿಳಿದ ವರು ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಇನ್ಸ್‌ಪೆಕ್ಟರ್ ಅವರ ಮೊಬೈಲ್ ಸಂಖ್ಯೆ: 9480804833ಗೆ ಮಾಹಿತಿ ನೀಡಿ ಕಾಣೆಯಾಗಿರುವವರ ಪತ್ತೆಗೆ ಸಹಕಾರ ನೀಡಬೇಕು ಎಂದು ಲಕ್ಕೇಗೌಡ ಮನವಿ ಮಾಡಿದ್ದಾರೆ