‘ಸ್ವಾರ್ಡ್ಸ್ ಆಫ್‌ ಐರನ್‌’: ಹಮಾಸ್‌ ವಿರುದ್ಧ ಪಣತೊಟ್ಟಿರುವ ಇಸ್ರೇಲ್‌ ಕಾರ್ಯಾಚರಣೆಯ ವಿಡಿಯೋ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ದೇಶದ ಮೇಲೆಯೇ 7 ಸಾವಿರ ರಾಕೆಟ್‌ ಅನ್ನುಉಡಾಯಿಸಿ ವಿಕೃತಿ ಮೆರೆದಿರುವ ಹಮಾಸ್‌ ಉಗ್ರರ ವಿರುದ್ಧ ಇಸ್ರೇಲ್‌ ಯುದ್ಧ ಸಾರಿದ್ದು,ಈ ಹೋರಾಟಕ್ಕೆ ‘ಸ್ವಾರ್ಡ್ಸ್ ಆಫ್‌ ಐರನ್‌’ ಎಂದು ಹೆಸರನ್ನಿಟ್ಟಿದೆ.

ಈಗಾಗಲೇ ಯಾವ ಕಾರಣಕ್ಕೂ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ ಮಾಡಿರುವ ಉಗ್ರರರನ್ನು ಸದೆಬಡಿಯದೇ ಬಿಡೋದಿಲ್ಲ ಎಂದು ಪಣತೊಟ್ಟಿರುವ ಇಸ್ರೇಲ್‌ ತಮ್ಮ ಕಾರ್ಯಾಚರಣೆಯ ವಿಡಿಯೋಗಳನ್ನು ರಿಲೀಸ್‌ ಮಾಡಿದೆ.

ಆಪರೇಷನ್‌ ಸ್ವಾರ್ಡ್ಸ್‌ ಆಫ್‌ ಐರನ್‌ನಲ್ಲಿ ಗಿಫ್ಟ್‌ ಮಾಡಲಾಗುವ ಬಾಂಬ್‌ಗಳ ವಿಡಿಯೋಗಳನ್ನು ರಿಲೀಸ್‌ ಮಾಡಿದೆ. ಇಸ್ರೇಲ್‌ ಏರ್‌ಫೋರ್ಸ್‌ ಈ ಬಾಂಬ್‌ಗಳನ್ನು ತನ್ನ ಯುದ್ಧವಿಮಾನಗಳಿಗೆ ಜೋಡಿಸುವ ವಿಡಿಯೋ ಇದಾಗಿದೆ. ಕೇವಲ 28 ಸೆಕೆಂಡ್‌ನ ವಿಡಿಯೋದಲ್ಲಿ ಕನಿಷ್ಠ 4 ರಿಂದ 5 ಬಾಂಬ್‌ಗಳನ್ನು ಸೇನಾ ಸಿಬ್ಬಂದಿ ಜೋಡಿಸುತ್ತಿರುವುದು ಕಂಡಿದೆ.

ಈ ಮೂಲಕ ಹಮಾಸ್‌ ಉಗ್ರರರ ಸದೆಬಡಿಯದೇ ಸುಮ್ಮನಾಗೋದಿಲ್ಲ ಎನ್ನುವ ಎಚ್ಚರಿಕೆಯನ್ನು ಅವರಿಗೆ ಮಾತ್ರವಲ್ಲ, ತನ್ನ ಅಕ್ಕಪಕ್ಕದ ಮುಸ್ಲಿಂ ರಾಷ್ಟ್ರಗಳಿಗೆ ಹಾಗೂ ಜಗತ್ತಿಗೆ ರವಾನಿಸಿದೆ. ಈ ವಿಡಿಯೋವನ್ನು ಸ್ವತಃ ಇಸ್ರೇಲ್‌ ಭದ್ರತಾ ಪಡೆ ಹಾಗೂ ಇಸ್ರೇಲ್‌ ಏರ್‌ಫೋರ್ಸ್‌ ತಮ್ಮ ಎಕ್ಸ್‌ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿದೆ.

ಇನ್ನೊಂದೆಡೆ ಹಮಾಸ್ ವಿರುದ್ಧ ಯುದ್ಧ ಮಾಡುವುದಾಗಿ ಇಸ್ರೇಲ್‌ ಘೋಷಣೆ ಮಾಡಿದ್ದು, ದೇಶದ ಜನರಿಗೆ ಮೀಸಲು ಸೇನಾಪಡೆಗೆ ಸೇರಿಕೊಳ್ಳುವಂತೆ ಸೂಚನೆ ನೀಡಿದೆ. ಇದರ ಭಾಗವಾಗಿ ಇಸ್ರೇಲ್‌ನ ಮಾಜಿ ಪ್ರಧಾನಿ ನಫ್ತಾಲಿ ಬೆನ್ನೆಟ್‌ ಕೂಡ ಇಸ್ರೇಲ್‌ ಮೀಸಲು ಸೇನೆಗೆ ಸೇರಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!