ಹಾಲಿನ ದರ ಏರಿಸಿದ ಮದರ್ ಡೈರಿ, ಲೀಟರ್ ದರ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ದೆಹಲಿ ಮತ್ತು ವಿವಿಧ ಮಾರುಕಟ್ಟೆಗಳಲ್ಲಿ ಒಂದು ಲೀಟರ್ ಕೆನೆ ಭರಿತ ಹಾಲಿನ ದರ 1ರೂಪಾಯಿಗೆ ಹಾಗೂ ಟೋಕನ್ ಹಾಲಿನ ದರ 2 ರೂಪಾಯಿಗೆ ಏರಿಸಲು ಮದರ್ ಡೈರಿ ನಿರ್ಧರಿಸಿದೆ.

ಲೀಟರ್‌ಗೆ 63 ರೂಪಾಯಿ ಇದ್ದ ಕೆನೆಭರಿತ ಹಾಲಿನ ದರ ಇದೀಗ 64 ರೂಪಾಯಿಯಾಗಿದೆ. ಇನ್ನು ಟೋಕನ್ ಹಾಲಿನ ದರ ಲೀಟರ್‌ಗೆ 50 ರೂಪಾಯಿ ಎನ್ನಲಾಗಿದೆ.

ಮದರ್ ಡೈರಿ ಇದೇ ವರ್ಷದಲ್ಲಿ ನಾಲ್ಕು ಬಾರಿ ತನ್ನ ದರ ಹೆಚ್ಚಿಸಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಪೂರೈಕೆ ವ್ಯತ್ಯಯ, ಉತ್ಪಾದನಾ ವೆಚ್ಚದ ಏರಿಕೆಯಿಂದಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದು ಮದರ್ ಡೈರು ವಕ್ತಾರರು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!