ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗನ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿಸಿಟಿವಿಯಲ್ಲಿ ಈ ಘಟನೆ ಕ್ಯಾಪ್ಚರ್ ಆಗಿದೆ.
ವಲ್ಸಾದ್‌ನ ರಾಯಲ್ ಶೆಲ್ಟರ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಹುಟ್ಟುಹಬ್ಬವನ್ನು ಆಚರಿಸಲು ಕುಟುಂಬ ಸದಸ್ಯರು, ಸ್ನೇಹಿತರೆಲ್ಲಾ ಬಂದಿದ್ದರು. ವೀಡಿಯೊದಲ್ಲಿ ಕುಟುಂಬ ಸದಸ್ಯರು ನೃತ್ಯ ಮಾಡುವುದನ್ನು ಕಾಣಬಹುದು, ಆದರೆ ಮಹಿಳೆ, ಆಕೆಯ ಪತಿ ಮತ್ತು ಅವರ ಮಗು ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು
ವಿಡಿಯೋದಲ್ಲಿ ಆಕೆ ಮಗುವನ್ನು ಪತಿಯ ಕೈಗೆ ಕೊಡುತ್ತಿರುವುದನ್ನು ಕಾಣಬಹುದು, ಆಕೆ ನಂತರ ತಲೆ ಹಿಡಿದುಕೊಂಡು ಕೆಳಗೆ ಕುಸಿದು ಬೀಳುತ್ತಾಳೆ. ಮಹಿಳೆಯು ಕುಸಿದು ಬೀಳುವ ಮೊದಲು ಗಂಡನ ಭುಜದ ಕಡೆಗೆ ವಾಲುತ್ತಿರುವುದನ್ನು ಕಾಣಬಹುದು. ಕುಟುಂಬ ಸದಸ್ಯರು ಅವಳ ಸಹಾಯಕ್ಕೆ ಧಾವಿಸಿದರು, ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಆಗಲೇ ಮೃತಪಟ್ಟಿದ್ದರು.
પુત્રના જન્મદિવસે જ પાર્ટીમાં માતાનુું હાર્ટ એટેકના કારણે નિધન…. pic.twitter.com/bQ0OCLQoqj
— jaydeep shah (@jaydeepvtv) September 15, 2024