ಹೊಸದಿಗಂತ ವರದಿ, ತುಮಕೂರು:
ಹಣದ ವಿಷಯಕ್ಕೆ ಅತ್ತೆ, ಸೊಸೆ ಮಧ್ಯೆ ಶುರವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ನಡೆದಿದೆ.
ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ಕಲ್ಲುಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತರು ಗ್ರಾಮದ ಕೆಂಪಮ್ಮ(60) ಎಂದು ಗುರುತಿಸಿದ್ದು ಆರೋಪಿ ಸೊಸೆ ಉಮಾದೇವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ
ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ 7ಸಾವಿರ ರೂಗಳನ್ನು ಉಮಾದೇವಿ ತಂಗಿ ಪಲ್ಲವಿ ಎಂಬುವರ ಖಾತೆಗೆ ಪಕ್ಕದ ಮನೆಯವರ ಮೂಲಕ ಫೋನ್ ಪೇ ಮಾಡಿಸಿದ ವಿಚಾರವಾಗಿ ಅತ್ತೆ ಹಾಗೂ ಸೊಸೆ ನಡುವೆ ಜಗಳ ಶುರುವಾಗಿತ್ತು. ಇದನ್ನು ತಪ್ಪಾಗಿ ತಿಳಿದ ಸೊಸೆ ಉಮಾದೇವಿ ಹಣ ನೀಡಿರುವ ವಿಷಯವನ್ನು ಗಂಡ ರಾಜೇಶನಿಗೆ ಹೇಳಿದ್ದಿರಾ ಎಂದು ಅತ್ತೆ ಮೇಲೆ ಮನಸ್ಸೋ ಇಚ್ಛೆ ಕೋಲಿನ ಮೂಲಕ ಹಲ್ಲೆ ಮಾಡಿದ ಪರಿಣಾಮ ಕೆಂಪಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ತಾತ್ಕಾಲಿಕ ಚಿಕಿತ್ಸೆ ಕೊಡಿಸಿದ್ದರು. ಗಂಭೀರ ಗಾಯವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಬಗ್ಗೆ ವೈದ್ಯರು ತಿಳಿದ್ದರು. ಇದನ್ನು ಲೆಕ್ಕಿಸದ ಸೊಸೆ ಅತ್ತೆಯನ್ನು ಮನೆಗೆ ಕರೆತಂದಿದ್ದು ಕೆಂಪಮ್ಮ ಮೃತಪಟ್ಟಿದ್ದಾರೆ.
ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಡಿವೈಎಸ್‌ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ರಾಮಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.