ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಿರುವವರ ಸಹನೆ, ಕಷ್ಟ, ಮಮತೆ, ಪರದಾಟ ಮಕ್ಕಳಿರುವವರಿಗೆ ಮಾತ್ರ ಗೊತ್ತು! ದೊಡ್ಡವರು ಅಥವಾ ಒಂದು ವಯಸ್ಸಿಗೆ ಬಂದ ಮಕ್ಕಳು ಯಾವಾಗ ಬೇಕು ಎಂದರೆ ಆಗ ಬಾಕ್ಸ್ ತೆಗೆದು ಊಟ ಮಾಡುತ್ತಾರೋ ಅಥವಾ ಪ್ಯಾಕ್ ಓಪನ್ ಮಾಡಿ ಬಿಸ್ಕೆಟ್ ತಿನ್ನುತ್ತಾರೋ ಅದೇ ರೀತಿ ಬರೀ ಹಾಲು ಕುಡಿಯುವ ಮಕ್ಕಳಿಗೆ ಯಾವಾಗ ಹಸಿವಾಗುತ್ತದೆ ಎನ್ನೋದು ಗೊತ್ತಾಗೋದಿಲ್ಲ.
ನಮ್ಮ ಮೆಟ್ರೋ ಸ್ಟೇಷನ್‌ನಲ್ಲಿ ಮೆಟ್ರೋಗಾಗಿ ಕಾಯ್ತಿದ್ದ ಕೂಸೊಂದು ಏಕಾಏಕಿ ಅಳೋದಕ್ಕೆ ಶುರು ಮಾಡಿದ್ದು, ಅದರ ಹಸಿವು ನೀಗಿಸೋಕೆ ತಾಯಿಗೆ ಸಾಧ್ಯವಾಗಲೇ ಇಲ್ಲ. ಯಾಕಂದ್ರೆ ಮೆಟ್ರೋ ಸ್ಟೇಷನ್‌ನಲ್ಲಿ ಆರೈಕೆ ಕೇಂದ್ರ ಇಲ್ಲ. ಕಡೆಗೂ ತಾಯಿ ಹುಡುಕಾಡಿ ಸುಸ್ತಾಗಿ ಪ್ಲಾಟ್‌ಫಾರ್ಮ್‌ನ ಮೂಲೆಯಲ್ಲಿ ಕುಳಿತು ಫೀಡಿಂಗ್ ಮಾಡಿಸಿದ್ದಾರೆ.
ತಾಯಿ ಎಲ್ಲೆಡೆ ಆರೈಕೆ ಕೇಂದ್ರಕ್ಕಾಗಿ ಹುಡುಕಾಡುವ ವಿಡಿಯೋ ವೈರಲ್ ಆಗಿದ್ದೇ ತಡ ಮಹಿಳಾ ಆಯೋಗ ಆರೈಕೆ ಕೇಂದ್ರ ಸ್ಥಾಪಿಸುವಂತೆ ಬಿಎಂಆರ್ಸಿಎಲ್ಗೆ ಪತ್ರ ಬರೆದಿದೆ.ಈ ವಿಚಾರ ತಿಳಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬಿಎಂಆರ್ಸಿಎಲ್ಗೆ ಪತ್ರ ಬರೆದು ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ಸ್ಥಾಪನೆ ಮಾಡುವಂತೆ ಸೂಚಿಸಿದ್ದಾರೆ.
ನಿರ್ಭಯಾ ಯೋಜನೆಯಡಿ ಕೇಂದ್ರ ಸರ್ಕಾರ ದೇವಸ್ಥಾನ, ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ಸ್ಥಾಪನೆ ಮಾಡಿದೆ. ಇದೀಗ ನಮ್ಮ ಮೆಟ್ರೋ ನಿಲ್ದಾಣದಲ್ಲೂ ಆರೈಕೆ ಕೇಂದ್ರ ಸ್ಥಾಪಿಸುವಂತೆ ಆಗ್ರಹ ಕೇಳಿ ಬಂದಿದೆ.