ಜವಾಬ್ದಾರಿಗೆ ಇನ್ನೊಂದು ಹೆಸರೇ ಅಮ್ಮ, ಅದಕ್ಕೆ ಈ ವಿಡಿಯೋವೇ ಸಾಕ್ಷಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವೀಡಿಯೊಗಳು ವೈರಲ್ ಆಗುತ್ತಿವೆ. ಏನೇ ಆಗಲಿ ಒಳ್ಳೆಯದೋ ಕೆಟ್ಟದ್ದೋ ತಕ್ಷಣ ಗೊತ್ತಾಗುತ್ತದೆ. ಕೆಲವು ವೈರಲ್ ವೀಡಿಯೊಗಳು ಕಿರಿಕಿರಿ ನೀಡದರೆ ಮತ್ತೂ ಕೆಲವು ಸ್ಫೂರ್ತಿದಾಯಕವಾಗಿವೆ. ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜವಾಬ್ದಾರಿಗೆ ಇನ್ನೊಂದು ಹೆಸರೇ ಅಮ್ಮ. ಎಷ್ಟೇ ಬ್ಯುಸಿ ಇದ್ದರೂ ಮಕ್ಕಳೇ ಅವಳ ಪ್ರಪಂಚ. ತಾಯಿ ಯಾವಾಗಲೂ ತನ್ನ ಮಗುವಿನ ಬಗ್ಗೆ ಯೋಚಿಸುತ್ತಾಳೆ. ಮನೆಕೆಲಸಗಳನ್ನು ನೋಡಿಕೊಳ್ಳುವಾಗ, ಕಚೇರಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಲೇ ತಾಯಿಯಾಗಿ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುವ ಮಹಿಳೆ. ತಾಯಿ ತನ್ನ ಮಕ್ಕಳ ಬಗ್ಗೆ ಎಷ್ಟು ಜವಬ್ದಾರಿಯಿಂದ ಇರುತ್ತಾಳೆ ಎಂಬುದನ್ನು ತೋರಿಸುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ʻಇದಕ್ಕೆ ಏನು ಶೀರ್ಷಿಕೆ ನೀಡಬೇಕೆಂದು ಹೇಳಲು ನನಗೆ ಗೊತ್ತಾಗುತ್ತಿಲ್ಲʼ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ತಾಯಿಯೊಬ್ಬಳು ರಸ್ತೆಬದಿಯಲ್ಲಿ ಗಾಡಿ ಇಟ್ಟುಕೊಂಡು ಹೂವು-ಹಣ್ಣುಗಳನ್ನು ಮಾರುತ್ತಾ ಕುಟುಂಬವನ್ನು ಪೋಷಿಸುತ್ತಾ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಈ ವಿಡಿಯೋ ನೋಡಿದವರೆಲ್ಲ ಆಕೆಯ ಬಗೆಗೆ ಹೊಗಳಿಕೆಯ ಸುರಿಮಳೆ ಸುರಿಸುತ್ತಿದ್ದಾರೆ. ತನ್ನ ಜವಾಬ್ದಾರಿಯನ್ನು ಎಂದಿಗೂ ಮರೆಯದ ತಾಯಿ ಎಂದು ಕಮೆಂಟ್ ಮಾಡುತ್ತಿದ್ದರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!