ರುಚಿಕರವಾದ ಮೋತಿಚೂರ್ ಲಡ್ಡು ಮನೆಯಲ್ಲಿಯೇ ಹೀಗೆ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಲ್ಲಾ ಲಡ್ಡುಗಳಿಗಿಂತ ಮೋತಿಚೂರ್‌ ಲಡ್ಡು ರುಚಿಯೇ ಬೇರೆ. ʻವಿಶ್ವದಾಭಿರಾಮ ಲಡ್ಡು ತಿನ್ನು ಮಾಮʼ! ಮೋತಿಚೂರು ಲಡ್ಡು ತಿಂದರೆ ಹಿಂಗೆಲ್ಲ ಕವನಗಳು ಬರುತ್ತವೆ. ರಕ್ಷಾಬಂಧನ ಸಮಯದಲ್ಲಿ ಮೋತಿಚೂರ್‌  ಲಡ್ಡುಗೆ ಬೇಡಿಕೆ ಜಾಸ್ತಿ. ಇಷ್ಟು ರುಚಿಯಾಗಿ ಹೇಗೆ ಮಾಡೋದು ಅಂತ ನೋಡಿ.

ಬೇಕಾಗುವ ಸಾಮಾಗ್ರಿಗಳು:
* ಕಡಲೆ ಹಿಟ್ಟು – 2 ಕಪ್
* ಫುಡ್‌ ಕಲರ್
* ಸಕ್ಕರೆ – 2 ಕಪ್
* ಸ್ವಲ್ಪ ಏಲಕ್ಕಿ ಪುಡಿ
* ತುಪ್ಪ – 3 ಚಮಚ
* ಎಣ್ಣೆ
* ಬಾದಾಮಿ
* ಪಿಸ್ತಾ
* ಗೋಡಂಬಿ

ಮಾಡುವ ವಿಧಾನ:

ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, ಫುಡ್‌ ಕಲರ್‌ ನೀರು ಸೇರಿಸಿ ಉಂಡೆಗಳಿಲ್ಲದಂತೆ ಸ್ವಲ್ಪ ದಪ್ಪವಾಗಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೊಂದು ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಒಲೆಯ ಮೇಲೆ ಇಡಿ. ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ ಸಣ್ಣ ರಂಧ್ರಗಳನ್ನು ಹೊಂದಿರುವ ಬೂಂದಿ ಜಾರಿಗೆ ಹಿಟ್ಟನ್ನು ಹಾಕಿಕೊಳ್ಳುತ್ತಾ ಬೂಂದಿಯನ್ನು ತೆಗೆದುಕೊಳ್ಳಬೇಕು. ಬೂಂದಿ ಕಂದು ಬಣ್ಣ ಬಂದ ಕೂಡಲೇ ಅದನ್ನು ತೆಗೆಯಿರಿ.

ನಂತರ ಇನ್ನೊಂದು ಪಾತ್ರೆಯಲ್ಲಿ ನೀರು ಹಾಕಿ ನಂತರ ಸಕ್ಕರೆ ಹಾಕಿ ಗುಲಾಬ್ ಜಾಮೂನ್ ನಂತೆ ಪಾಕ ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ಫುಡ್‌ ಕಲರ್ ಸೇರಿಸಿ.‌ ಬಳಿಕ ಮಾಡಿಟ್ಟ ಬೂಂದಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಸ್ವಲ್ಪ ಏಲಕ್ಕಿ ಪುಡಿ, ಬಾದಾಮಿ, ಪಿಸ್ತಾ, ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಉಗುರು ಬೆಚ್ಚಗಿರುವ ವೇಳೆ ಕೈಗಳಿಂದ ಗಟ್ಟಿಯಾಗಿ ಒತ್ತುತ್ತಾ ಮೋತಿಚೂರ್ ಲಡ್ಡುಗಳನ್ನು ಮಾಡಿ. ಅಷ್ಟೇ ಸಿಂಪಲ್‌ ಹಾಗೂ ರುಚಿಯಾದ ರೆಸಿಪಿ ಸಿದ್ಧ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!