ಬಾಯಲ್ಲಿ ನೀರೂರಿಸೋ ಚೆಟ್ಟಿನಾಡ್ ಚಿಕನ್, ಹೇಗೆ ಮಾಡೋದು..

ಸಾಮಾಗ್ರಿಗಳು
ಚಿಕನ್
ಈರುಳ್ಳಿ
ಟೊಮ್ಯಾಟೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಚಕ್ಕೆ
ಲವಂಗ
ಕೊತ್ತಂಬರಿ ಕಾಳು
ಮೆಣಸುಕಾಳು
ಸೋಂಪು
ಜೀರಿಗೆ
ಏಲಕ್ಕಿ
ಕಾಯಿತುರಿ
ಖಾರದಪುಡಿ
ಕರಿಬೇವು
ಉಪ್ಪು
ಎಣ್ಣೆ
ಅರಿಶಿಣ

ಮಾಡುವ ವಿಧಾನ

  • ಮೊದಲು ಬಾಣಲೆಗೆ ಮಸಾಲೆ ಪದಾರ್ಥಗಳನ್ನು ಹಾಕಿ ಬಿಸಿ ಮಾಡಿ, ಇದಕ್ಕೆ ಕಾಯಿತುರಿ ಹಾಕಿ.
  • ನಂತರ ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಕರಿಬೇವು ಈರುಳ್ಳಿ ಹಾಕಿ ಬಾಡಿಸಿ
  • ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
  • ಇದೀಗ ಚಿಕನ್ ಹಾಕಿ, ಅರಿಶಿಣ ಪುಡಿ, ಉಪ್ಪು ಹಾಕಿ ಬಾಡಿಸಿ.
  • ಚಿಕನ್ ಚೆನ್ನಾಗಿ ಬೇಯಿಸಿ, ಇತ್ತ ಮಸಾಲೆ ಪದಾರ್ಥಗಳನ್ನು ಮಿಕ್ಸಿ ಮಾಡಿ, ಪುಡಿ ಮಾಡಿಕೊಳ್ಳಿ.
  • ಚಿಕನ್‌ಗೆ ಈ ಪುಡಿ ಹಾಕಿ ಮಿಕ್ಸ್ ಮಾಡಿ
  • ನಂತರ ಟೊಮ್ಯಾಟೊ ಹಾಕಿ ಚೆನ್ನಾಗಿ ಬೇಯಿಸಿ
  • ಎಣ್ಣೆ ಬಿಡುವವರೆಗೂ ಬಾಡಿಸಿ ಚಪಾತಿ ಅಥವಾ ರೊಟ್ಟಿ ಜೊತೆ ಚಿಕನ್ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!