ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ಬಗೆಯ ಐಸ್ ಕ್ರೀಮ್ ಗಳನ್ನು ನೋಡಿದ್ದೇವೆ.. ಕೇಳಿದ್ದೇವೆ.. ತಿಂದಿದ್ದೇವೆ. ಆದರೆ ಈ ಬಗೆಯ ಐಸ್ ಕ್ರೀಂ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದೆ.
ಐಸ್ ಕ್ರೀಮ್ ತಣ್ಣಗಿರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇಂತಹ ಐಸ್ ಕ್ರೀಂ ಅನ್ನು ಎಣ್ಣೆಯಲ್ಲಿ ಕರಿದರೆ? ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಅವರು ಹೆಪ್ಪುಗಟ್ಟಿದ ಸಿಹಿ ವೆನಿಲ್ಲಾ ಐಸ್ ಕ್ರೀಂ ಅನ್ನು ಹೊರತೆಗೆದು ಬಟ್ಟಲಿನಲ್ಲಿ ಹಾಕಿ ಚೆಂಡಿನಂತೆ ಮಾಡಿದ್ದಾರೆ. ಇದನ್ನು ಬ್ರೆಡ್ ಕ್ರಂಬ್ಸ್ ಪೌಡರ್ ನಲ್ಲಿ ಮಿಕ್ಸ್ ಮಾಡಿ ನಂತರ ಉಂಡೆಯನ್ನು ಎಣ್ಣೆಯಲ್ಲಿ ಕರಿದಿದ್ದಾರೆ.
ಕಂದು ಬಣ್ಣ ಬಂದ ಬಳಿಕ ಸರ್ವಿಂಗ್ ಬೌಲ್ ಗೆ ಹಾಕಿದರು. ಅದರ ನಂತರ ಚಾಕೊಲೇಟ್ ಕ್ರೀಮ್ ಅನ್ನು ಅದರ ಮೇಲೆ ಸುರಿದು ಸರ್ವ್ ಮಾಡಿದ್ದಾರೆ. ಈ ವೆರೈಟಿ ರೆಸಿಪಿಗೆ ಹಲವರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. “ನಾನು ಇದನ್ನು ಪ್ರಯತ್ನಿಸಿದೆ, ಇದು ತುಂಬಾ ರುಚಿಕರ ಹಾಗೂ ಅದ್ಭುತವಾಗಿದೆ”ಎಂದು ಬರೆದಿದ್ದಾರೆ. ಈಗ ವೈರಲ್ ಆಗಿರುವ ಈ ವಿಡಿಯೋ 67 ಸಾವಿರ ಲೈಕ್ಸ್, 1000 ಕಮೆಂಟ್ಸ್ ಮತ್ತು 86 ಸಾವಿರ ಶೇರ್ ಆಗಿದೆ.