ಹೊಸದಿಗಂತ ವರದಿ ಹಾಸನ:
ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ದಂಡು ವಿವಿಧೆಡೆ ಸಂಚಾರ ನಡೆಸುತ್ತಿವೆ. ಹೀಗಾಗಿ ಸಾರ್ವಜನಿಕರು ಎಚ್ಚರವಹಿಸಿ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ ಭಾನುವಾರ ಸಕಲೇಶಪುರ, ಬೇಲೂರು, ಹಾಗೂ ಆಲೂರು ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಾಡಾನೆಗಳು ಸಂಚಾರ ಕಂಡುಬಂದಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮಾಹಿತಿ ರವಾನಿಸಿ, ಜಾಗೃತಿವಹಿಸುವಂತೆ ಮನವಿ ಮಾಡಿದೆ.
ಎಲ್ಲೆಲ್ಲೆ ಕಾಡಾನೆಗಳ ಹಿಂಡು ಕಂಡುಬಂದಿದೆ ?
ಸಕಲೇಶಪುರ ತಾಲ್ಲೂಕಿನ ಲಕ್ಕುಂದ, ಗೀತಾಂಜಲಿ ಎಸ್ಟೇಟ್ ಹಳೆಕೆರೆ, ಕಿರು ಹುಣಸೆ ಕೊಟ್ಟರ್ ಗಂಡಿ ಫಾರೆಸ್ಟ್, ಸತ್ತಿಗಲ್ ಸ್ಮಶಾನ ಕಾಡು, ಉದಯವಾರ ಗುಡ್ಡ ಬೆಟ್ಟ ಎಸ್ಟೇಟ್ ಹತ್ತಿರ ಕಾಡಾನೆಗಳ ಗುಂಪು ಕಂಡು ಬಂದಿದೆ.
ಹೆತ್ತೂರು – ಯಸಳೂರು ಹೋಬಳಿಯ ಮರ್ಕಳ್ಳಿ ಗ್ರಾಮದ ಕಲ್ಲುತೋಟ, ಮೆಕ್ಕಿರಮನೆ ಮೋಟಾಗೂರು ಗ್ರಾಮದ ಹೆಗ್ಗೋಡ್ಲು, ಹಳ್ಳಿಯೂರು ಕಿರ್ಕಳ್ಳಿ ಗ್ರಾಮದ ಒಂಟಿ ಗದ್ದೆ, ಕೆಳ ಹಾಡ್ಯ ದೀನೆಕೆರೆ ಎಸ್ಟೇಟ್ ಸುತ್ತ ಮುತ್ತ ಸಂಚಾರ ನಡೆಸುತ್ತಿವೆ.
ಆಲೂರು ತಾಲ್ಲೂಕಿನ ಗೋವಿಂದನಹಳ್ಳಿ, ಸಾರ ಎಸ್ಟೇಟ್ ನಲ್ಲೂರಿನಲ್ಲಿ, ಅಬ್ಬನ ಕೊಪ್ಪಲು ಫಾರೆಸ್ಟ್ ಹತ್ತಿರ ಕಾಡಾನೆಗಳ ಗುಂಪು ಕಂಡುಬಂದಿದೆ.
ಬೇಲೂರು ತಾಲೂಕಿನಲ್ಲಿ ವಿಕ್ರಮ್ ಅವರ ತೋಟ ಮತವರ, ಅಶೋಕ ಅವರ ತೋಟ ಮೂವಳ ಹತ್ತಿರ ಕಾಡಾನೆಗಳು ಸಂಚಾರ ನಡೆಸುತ್ತ ಬೀಡುಬಿಟ್ಟಿವೆ.