ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಫಿಲ್ಮಿ ರೀತಿ ಮಾರಾಮಾರಿ! ಮೂವರು ಪುಂಡರು ಅರೆಸ್ಟ್‌

ಹೊಸದಿಗಂತ ವರದಿ ಹಾಸನ :

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಾ. 8 ರಂದು ಓರ್ವ ಯುವಕನ ಬಟ್ಟೆ ಬಿಚ್ಚಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಿನಿಮೀಯ ರೀತಿ ಮನಬಂದಂತೆ ಹಲ್ಲೆಮಾಡಿದ್ದ ಮೂವರು ಪುಂಡ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಲೋಹಿತ್, ಋತ್ವಿಕ್‌, ಆಕಾಶ್ ಬಂಧಿತ ಆರೋಪಿಗಳು. ಚೇತನ್ ಹಲ್ಲೆಗೊಳಗಾಗಿದ್ದ ಯುವಕ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ. ಹೋಳಿ ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ ನಡೆದು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ನೇಹಿತರನ್ನು ನೋಡಲು ಚಂದನ್ ಮಾ. 8 ರಂದು ಹಾಸನ ಜಿಲ್ಲಾಸ್ಪತ್ರೆಗೆ ತೆರಳಿದ್ದ. ಈ ವೇಳೆ ಆಸ್ಪತ್ರೆಗೆ ಬಂದಿದ್ದ ಚಂದನ್ ಗೆ ಸಾರ್ವಜನಿಕ ವಾಗಿಯೇ ಬಟ್ಟೆ ಬಿಚ್ಚಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಿನಿಮೀಯ ರೀತಿ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಘಟನೆ ನಡೆದ ನಂತರ ಪೊಲೀಸ್ ಠಾಣೆಗೆ ತೆರಳಿ ಚಂದನ್ ದೂರು ನೀಡಿದ್ದ.

ಇದೀಗ ಹಲ್ಲೆ ನಡೆಸಿದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಮೂವರು ಹಾಸನ ಹೊರವಲಯದ ಚಿಕ್ಕಹೊನ್ನೇನಹಳ್ಳಿ ಗ್ರಾಮದವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!