ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮಾತೃವಿಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿ (97) ವಯೋಸಹಜ ಅಸೌಖ್ಯದಿಂದ ಭಾನುವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕೃಷಿ ಹೈನುಗಾರಿಕೆ ಕ್ಷೇತ್ರದಲ್ಲೂ ಗುರುತಿಸಿಕೊಂಡ ಲಚ್ಚಿ ಪೂಜಾರ್ತಿ ಅವರು, ತನ್ನ ಪುತ್ರನ ರಾಜಕಾರಣದ ಮಜಲುಗಳಿಗೆ ಸ್ಪೂರ್ತಿದಾಯರಾಗಿದ್ದರು.

ಲಚ್ಚಿ ಪೂಜಾರ್ತಿ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಅಪೂರ್ವ ಮುತ್ತಿನಂತಹ ವ್ಯಕ್ತಿಯನ್ನು ದೇಶಕ್ಕೆ ನೀಡಿದ ಮಹಾ ತಾಯಿಗೆ ಉದ್ಧಂಢ ಪ್ರಣಾಮಗಳು.

LEAVE A REPLY

Please enter your comment!
Please enter your name here

error: Content is protected !!